ಕುಶಾಲನಗರ, ಡಿ. 3: ಕುಶಾಲನಗರ ಶ್ರೀ ಗಣಪತಿ ದೇವಾಲಯಕ್ಕೆ ವಾಲ್ನೂರು ಕಾಫಿ ಬೆಳೆಗಾರ ಚೇಂದಂಡ ಜೆಮ್ಸಿ ಪೊನ್ನಪ್ಪ ದಂಪತಿಗಳು ಬೆಳ್ಳಿಯ ಸಿಂಹ ಗಣಪತಿ ಕವಚವನ್ನು ಕೊಡುಗೆಯಾಗಿ ನೀಡಿದರು. ಅಂದಾಜು ರೂ. 3 ಲಕ್ಷ ಮೌಲ್ಯದ ಬೆಳ್ಳಿ ಕವಚವನ್ನು ಅವರು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಮತ್ತು ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಅವರ ಉಪಸ್ಥಿತಿಯಲ್ಲಿ ಸಮರ್ಪಿಸಿದರು.

ದೇವಾಲಯದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸುವ ಮೂಲಕ ಬೆಳ್ಳಿ ಕವಚವನ್ನು ಸ್ವೀಕರಿಸಲಾಯಿತು. ಸಮಿತಿ ಪರವಾಗಿ ದಾನಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.