ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ಹಾರಂಗಿಯ ಉಪ ಕೇಂದ್ರ ಪ್ರದೇಶ ಕಳೆದ ಆರು ವರ್ಷಗಳಿಂದ ಹೊಸತನವನ್ನು ಪಡೆದುಕೊಂಡು ಇಲಾಖೆಯ ಅಧಿಕಾರಿಗಳ ಮುತುವರ್ಜಿಯಿಂದ ಇದೀಗ ತೋಟಗಾರಿಕಾ ಕ್ಷೇತ್ರದಲ್ಲಿ ಸಸಿ ನೆಡುವ ಮೂಲಕ ಸೀಬೆ ಬೆಳೆಯುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಈ ಕೇಂದ್ರದಲ್ಲಿ ಇಲಾಖೆಯ ವತಿಯಿಂದ 17 ಸಾವಿರ ಹೈಬ್ರೀಡ್ ಸೀಬೆ ಗಿಡಗಳನ್ನು ನೆಟ್ಟು ಅದರ ಮೂಲಕ ಫಸಲುಗಳನ್ನು ತೆಗೆಯುವ ಕಾರ್ಯ ಆರಂಭವಾಗಿದೆ.

ಈ ಕ್ಷೇತ್ರ ವ್ಯಾಪ್ತಿಯು 100 ಎಕರೆ ಪ್ರದೇಶವಾಗಿದ್ದು, ಇದರಲ್ಲಿ ಈಗಾಗಲೇ 17 ಎಕರೆಗಳಷ್ಟರಲ್ಲಿ ಸೀಬೆ ಹಣ್ಣಿನ ಗಿಡಗಳು ಒಂದು ಎಕರೆ ಪ್ರದೇಶದಲ್ಲಿ ಕಿತ್ತಳೆ ಗಿಡಗಳು ಮತ್ತು ಒಂದು ಎಕರೆ ಪ್ರದೇಶದಲ್ಲಿ ಕಾಳುಮೆಣಸು ಗಿಡಗಳನ್ನು ಬೆಳೆಸಲಾಗಿದೆ. ಈ ಪ್ರದೇಶಕ್ಕೆ ಹೊಂದಿರುವ ಹುದುಗೂರು ಮೀಸಲು ಅರಣ್ಯ ಪ್ರದೇಶದಿಂದ ಕಾಡಾನೆಗಳ ದಾಳಿಯಿಂದಾಗಿ ತೋಟಗಾರಿಕಾ ಸಸ್ಯ ಕ್ಷೇತ್ರವು ಸಂಪೂರ್ಣವಾಗಿ ಹಾಳಾಗಿತ್ತು. ಸರಕಾರ ನೀಡಿದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ ಮೊದಲ ಆನೆ ಕಂದಕದ ಜೊತೆಯಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆ ಕ್ರಮಬದ್ಧವಾಗಿ ಇರುವುದರಿಂದ ಕಾಡಾನೆಗಳು ಬರದ ಹಾಗೆ ಮಾಡಿದ ಪರಿಣಾಮವಾಗಿ ಅಲ್ಲಿನ ತೋಟಗಾರಿಕಾ ಕ್ಷೇತ್ರವು ಅಭಿವೃದ್ಧಿಯತ್ತ ಸಾಗುತ್ತಿದೆ.

ಮದಲಾಪುರ ತೋಟಗಾರಿಕಾ ಕ್ಷೇತ್ರದಲ್ಲಿ ಅಲಹಾಬಾದ್ ಸಫೇದ್ ಲಗೋ 49 ಎಂಬ ಹೈಬ್ರೀಡ್ ತಳಿಯ ಸೀಬೆ ಗಿಡಗಳನ್ನು ತರಿಸಿಕೊಂಡು ಹವಾಮಾನಕ್ಕೆ ಅನುಗುಣವಾಗಿ ಅಂತರವನ್ನು ಕಾಯ್ದುಕೊಂಡು ನೆಡುವುದರ ಮೂಲಕ ಬೇಸಾಯ ಮಾಡಲಾಗುತ್ತಿದೆ. ನಾಲ್ಕು ವರ್ಷಗಳಲ್ಲಿ ಈ ಕ್ಷೇತ್ರದ 17 ಎಕರೆ ಪ್ರದೇಶದಲ್ಲಿರುವ ಸೀಬೆ ಗಿಡಗಳು ಈಗಾಗಲೇ ಮರಗಳಾಗಿ ಬೆಳೆದು ಉತ್ತಮವಾದ ಫಸಲನ್ನು ನೀಡುತ್ತಿವೆ.

ಆರೋಗ್ಯದ ಹಿತದೃಷ್ಟಿಯಿಂದ ಸೀಬೆ ಹಣ್ಣು ಬಡವರ ಸೇಬು ಎಂಬುದು ಜನ ಬಳಕೆಯ ಪದವಾಗಿದೆ. ಅದರಂತೆಯೇ ಸೀಬೆ ಹಣ್ಣು ಕೆಲವು ರೋಗ ನಿರೋಧಕ ಶಕ್ತಿಯನ್ನೂ ಹೊಂದಿದೆ ಎಂಬುದು ತಿಳಿದವರ ಅಭಿಪ್ರಾಯವಾಗಿದೆ. ಅದರಂತೆ ಈ ಹಣ್ಣಿಗೆ ಎಲ್ಲೆಡೆ ಬೇಡಿಕೆ ಇರುವುದನ್ನೂ ಕಾಣಬಹುದಾಗಿದೆ.

ಈಗಾಗಲೇ ಈ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಬೆಳೆದ ಸೀಬೆ ಫಸಲುಗಳಿಂದ ಹರಾಜು ಪ್ರಕ್ರಿಯೆಯಲ್ಲಿ 90 ಸಾವಿರ ಆದಾಯ ಮತ್ತು ಕಿತ್ತಳೆ ಗಿಡಗಳಿಂದ 70 ಸಾವಿರ ಮತ್ತು ಕಾಳುಮೆಣಸು ಗಿಡಗಳಿಂದ 59 ಸಾವಿರ ಅದಾಯ ಬಂದಿದ್ದು ಸರಕಾರಕ್ಕೆ ಸಂದಾಯ ಮಾಡಲಾಗಿದೆ.

ಜಿಲ್ಲೆಯ ತೋಟಗಾರಿಕಾ ಇಲಾಖೆಯ ಮೂಲಕ ನೀಡುವ ಅನುದಾನದಲ್ಲಿ ನಿರ್ವಹಣೆ ಮಾಡುವುದರ ಮೂಲಕ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಈ ಕ್ಷೇತ್ರವನ್ನು ಮಾದರಿ ತೋಟಗಾರಿಕಾ ಕ್ಷೇತ್ರವನ್ನಾಗಿ ಮಾಡುವುದರ ಮೂಲಕ ಯುವಕರು ತಮ್ಮ ಓದಿನ ಜೊತೆಯಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ತಮ್ಮನ್ನು ತೊಡಗಿಸಿಕೊಳ್ಳಲು ತರಬೇತಿಯನ್ನು ನೀಡಲಾಗುತ್ತದೆ. ಜಿಲ್ಲೆಯ ರೈತರು ಕ್ಷೇತ್ರಕ್ಕೆ ಭೇಟಿ ನೀಡಿದಾಗ ತೋಟಗಾರಿಕಾ ಬೆಳೆಯ ಪ್ರಾತ್ಯಕ್ಷತೆಯನ್ನು ನೋಡಬಹುದಾಗಿದೆ. ಅಲ್ಲದೆ ಇರುವ ಕಡಿಮೆ ಪ್ರದೇಶದ ಜಮೀನಿನಲ್ಲಿ ಹೈಬ್ರೀಡ್ ತಳಿಗಳ ಬೇಸಾಯ ಮಾಡುವ ಮೂಲಕ ತಮ್ಮ ಅರ್ಥಿಕ ಮಟ್ಟವನ್ನು ಕಡಿಮೆ ಖರ್ಚಿನಲ್ಲಿ ಸುಧಾರಿಸಲು ಸಾಧ್ಯವಾಗುವುದು. ಇಂದಿನ ಆಧುನಿಕ ಕಾಲದಲ್ಲಿ ಯುವಕರು ವೈಜ್ಞಾನಿಕ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡು ಮುಂದುವರಿದದ್ದೇ ಆದಲ್ಲಿ ಹೆಚ್ಚಿನ ಆದಾಯಗಳಿಸಬಹುದಾಗಿದೆ ಎಂದು ಹಾರಂಗಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ವರದರಾಜು ಅವರು ಹೇಳುತ್ತಾರೆ.

- ನಾಗರಾಜಶೆಟ್ಟಿ, ಕೂಡಿಗೆ.ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ಹಾರಂಗಿಯ ಉಪ ಕೇಂದ್ರ ಪ್ರದೇಶ ಕಳೆದ ಆರು ವರ್ಷಗಳಿಂದ ಹೊಸತನವನ್ನು ಪಡೆದುಕೊಂಡು ಇಲಾಖೆಯ ಅಧಿಕಾರಿಗಳ ಮುತುವರ್ಜಿಯಿಂದ ಇದೀಗ ತೋಟಗಾರಿಕಾ ಕ್ಷೇತ್ರದಲ್ಲಿ ಸಸಿ ನೆಡುವ ಮೂಲಕ ಸೀಬೆ ಬೆಳೆಯುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಈ ಕೇಂದ್ರದಲ್ಲಿ ಇಲಾಖೆಯ ವತಿಯಿಂದ 17 ಸಾವಿರ ಹೈಬ್ರೀಡ್ ಸೀಬೆ ಗಿಡಗಳನ್ನು ನೆಟ್ಟು ಅದರ ಮೂಲಕ ಫಸಲುಗಳನ್ನು ತೆಗೆಯುವ ಕಾರ್ಯ ಆರಂಭವಾಗಿದೆ.

ಈ ಕ್ಷೇತ್ರ ವ್ಯಾಪ್ತಿಯು 100 ಎಕರೆ ಪ್ರದೇಶವಾಗಿದ್ದು, ಇದರಲ್ಲಿ ಈಗಾಗಲೇ 17 ಎಕರೆಗಳಷ್ಟರಲ್ಲಿ ಸೀಬೆ ಹಣ್ಣಿನ ಗಿಡಗಳು ಒಂದು ಎಕರೆ ಪ್ರದೇಶದಲ್ಲಿ ಕಿತ್ತಳೆ ಗಿಡಗಳು ಮತ್ತು ಒಂದು ಎಕರೆ ಪ್ರದೇಶದಲ್ಲಿ ಕಾಳುಮೆಣಸು ಗಿಡಗಳನ್ನು ಬೆಳೆಸಲಾಗಿದೆ. ಈ ಪ್ರದೇಶಕ್ಕೆ ಹೊಂದಿರುವ ಹುದುಗೂರು ಮೀಸಲು ಅರಣ್ಯ ಪ್ರದೇಶದಿಂದ ಕಾಡಾನೆಗಳ ದಾಳಿಯಿಂದಾಗಿ ತೋಟಗಾರಿಕಾ ಸಸ್ಯ ಕ್ಷೇತ್ರವು ಸಂಪೂರ್ಣವಾಗಿ ಹಾಳಾಗಿತ್ತು. ಸರಕಾರ ನೀಡಿದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ ಮೊದಲ ಆನೆ ಕಂದಕದ ಜೊತೆಯಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆ ಕ್ರಮಬದ್ಧವಾಗಿ ಇರುವುದರಿಂದ ಕಾಡಾನೆಗಳು ಬರದ ಹಾಗೆ ಮಾಡಿದ ಪರಿಣಾಮವಾಗಿ ಅಲ್ಲಿನ ತೋಟಗಾರಿಕಾ ಕ್ಷೇತ್ರವು ಅಭಿವೃದ್ಧಿಯತ್ತ ಸಾಗುತ್ತಿದೆ.

ಮದಲಾಪುರ ತೋಟಗಾರಿಕಾ ಕ್ಷೇತ್ರದಲ್ಲಿ ಅಲಹಾಬಾದ್ ಸಫೇದ್ ಲಗೋ 49 ಎಂಬ ಹೈಬ್ರೀಡ್ ತಳಿಯ ಸೀಬೆ ಗಿಡಗಳನ್ನು ತರಿಸಿಕೊಂಡು ಹವಾಮಾನಕ್ಕೆ ಅನುಗುಣವಾಗಿ ಅಂತರವನ್ನು ಕಾಯ್ದುಕೊಂಡು ನೆಡುವುದರ ಮೂಲಕ ಬೇಸಾಯ ಮಾಡಲಾಗುತ್ತಿದೆ. ನಾಲ್ಕು ವರ್ಷಗಳಲ್ಲಿ ಈ ಕ್ಷೇತ್ರದ 17 ಎಕರೆ ಪ್ರದೇಶದಲ್ಲಿರುವ ಸೀಬೆ ಗಿಡಗಳು ಈಗಾಗಲೇ ಮರಗಳಾಗಿ ಬೆಳೆದು ಉತ್ತಮವಾದ ಫಸಲನ್ನು ನೀಡುತ್ತಿವೆ.

ಆರೋಗ್ಯದ ಹಿತದೃಷ್ಟಿಯಿಂದ ಸೀಬೆ ಹಣ್ಣು ಬಡವರ ಸೇಬು ಎಂಬುದು ಜನ ಬಳಕೆಯ ಪದವಾಗಿದೆ. ಅದರಂತೆಯೇ ಸೀಬೆ ಹಣ್ಣು ಕೆಲವು ರೋಗ ನಿರೋಧಕ ಶಕ್ತಿಯನ್ನೂ ಹೊಂದಿದೆ ಎಂಬುದು ತಿಳಿದವರ ಅಭಿಪ್ರಾಯವಾಗಿದೆ. ಅದರಂತೆ ಈ ಹಣ್ಣಿಗೆ ಎಲ್ಲೆಡೆ ಬೇಡಿಕೆ ಇರುವುದನ್ನೂ ಕಾಣಬಹುದಾಗಿದೆ.

ಈಗಾಗಲೇ ಈ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಬೆಳೆದ ಸೀಬೆ ಫಸಲುಗಳಿಂದ ಹರಾಜು ಪ್ರಕ್ರಿಯೆಯಲ್ಲಿ 90 ಸಾವಿರ ಆದಾಯ ಮತ್ತು ಕಿತ್ತಳೆ ಗಿಡಗಳಿಂದ 70 ಸಾವಿರ ಮತ್ತು ಕಾಳುಮೆಣಸು ಗಿಡಗಳಿಂದ 59 ಸಾವಿರ ಅದಾಯ ಬಂದಿದ್ದು ಸರಕಾರಕ್ಕೆ ಸಂದಾಯ ಮಾಡಲಾಗಿದೆ.

ಜಿಲ್ಲೆಯ ತೋಟಗಾರಿಕಾ ಇಲಾಖೆಯ ಮೂಲಕ ನೀಡುವ ಅನುದಾನದಲ್ಲಿ ನಿರ್ವಹಣೆ ಮಾಡುವುದರ ಮೂಲಕ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಈ ಕ್ಷೇತ್ರವನ್ನು ಮಾದರಿ ತೋಟಗಾರಿಕಾ ಕ್ಷೇತ್ರವನ್ನಾಗಿ ಮಾಡುವುದರ ಮೂಲಕ ಯುವಕರು ತಮ್ಮ ಓದಿನ ಜೊತೆಯಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ತಮ್ಮನ್ನು ತೊಡಗಿಸಿಕೊಳ್ಳಲು ತರಬೇತಿಯನ್ನು ನೀಡಲಾಗುತ್ತದೆ. ಜಿಲ್ಲೆಯ ರೈತರು ಕ್ಷೇತ್ರಕ್ಕೆ ಭೇಟಿ ನೀಡಿದಾಗ ತೋಟಗಾರಿಕಾ ಬೆಳೆಯ ಪ್ರಾತ್ಯಕ್ಷತೆಯನ್ನು ನೋಡಬಹುದಾಗಿದೆ. ಅಲ್ಲದೆ ಇರುವ ಕಡಿಮೆ ಪ್ರದೇಶದ ಜಮೀನಿನಲ್ಲಿ ಹೈಬ್ರೀಡ್ ತಳಿಗಳ ಬೇಸಾಯ ಮಾಡುವ ಮೂಲಕ ತಮ್ಮ ಅರ್ಥಿಕ ಮಟ್ಟವನ್ನು ಕಡಿಮೆ ಖರ್ಚಿನಲ್ಲಿ ಸುಧಾರಿಸಲು ಸಾಧ್ಯವಾಗುವುದು. ಇಂದಿನ ಆಧುನಿಕ ಕಾಲದಲ್ಲಿ ಯುವಕರು ವೈಜ್ಞಾನಿಕ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡು ಮುಂದುವರಿದದ್ದೇ ಆದಲ್ಲಿ ಹೆಚ್ಚಿನ ಆದಾಯಗಳಿಸಬಹುದಾಗಿದೆ ಎಂದು ಹಾರಂಗಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ವರದರಾಜು ಅವರು ಹೇಳುತ್ತಾರೆ.

- ನಾಗರಾಜಶೆಟ್ಟಿ, ಕೂಡಿಗೆ.