ವೀರಾಜಪೇಟೆ ವರದಿ, ಡಿ. 3: ವಯೋವೃದ್ಧೆಯೊಬ್ಬರು ತೆರೆದ ಬಾವಿಯಲ್ಲಿ ಬಿದ್ದು ಮರಣ ಹೊಂದಿದ್ದ ಘಟನೆ ಕೊಳ್ತೋಡು ಬೈಗೋಡು ಗ್ರಾಮದಲ್ಲಿ ನಡೆದಿದೆ.

ವೀರಾಜಪೇಟೆ ಗ್ರಾಮಾಂತರ ಪ್ರದೇಶವಾದ ಕೊಳ್ತೋಡು ಬೈಗೋಡು ನಿವಾಸಿ ಮುರುವಂಡ ಕಾರ್ಯಪ್ಪ ಅವರ ಪತ್ನಿ ಕಾಮಿ (ಕಾಮವ್ವ -85) ಮೃತ ದುರ್ದೈವಿ.

ಮೃತರು ಮನೆಯಲ್ಲಿ ನಿನ್ನೆ ರಾತ್ರಿ ಮಲಗಿದ್ದು ಇಂದು ಮುಂಜಾನೆ ಮೃತರ ಮಗ ದೇವಯ್ಯ ಅವರು ಮಲಗುವ ಕೋಣೆಯಲ್ಲಿ ನೋಡಿದ ವೇಳೆ ತಾಯಿ ಇಲ್ಲದಿರುವುದು ಗೋಚರಿಸಿದೆ. ಮನೆಯ ಎಲ್ಲಾ ಕೋಣೆಯಲ್ಲಿ ಹುಡುಕಾಟ ಮಾಡಿದ್ದು, ಮನೆಯಲ್ಲಿಯಿಲ್ಲದಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಮನೆಯ ವಠಾರ ತೋಟ, ಗದ್ದೆಯ ಭಾಗದಲ್ಲಿ ಹುಡುಕಾಟ ಮಾಡಿದ್ದಾರೆ. ಅನುಮಾನದಿಂದ ಮನೆಯ ಸನಿಹವಿರುವ ಗದ್ದೆಗೆ ಹೊಂದಿಕೊಂಡಿರುವ ತೆರೆದ ಬಾವಿಯನ್ನು ನೋಡಲಾಗಿ ತಾಯಿಯ ಶವ ಪತ್ತೆಯಾಗಿದೆ. ತಕ್ಷಣವೇ ಗ್ರಾಮಾಂತರ ಪೆÇಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಸಿಬ್ಬಂದಿಗಳು ಭೇಟಿ ನೀಡಿ ಬಾವಿಯಿಂದ ಶವವನ್ನು ಮೇಲಕ್ಕೆತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಸಿದಂತೆ ವೀರಾಜಪೇಟೆ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.