*ಗೋಣಿಕೊಪ್ಪಲು, ಡಿ. 3: ದೇಶ ದ್ರೋಹಿ ಮತ್ತು ಉಗ್ರ ಸಂಘಟನೆಗಳ ಪರ ಮಂಗಳೂರಿನ ಸಕ್ರ್ಯೂಟ್ ಹೌಸ್ ರಸ್ತೆಯ ಅಪಾರ್ಟ್‍ಮೆಂಟ್‍ವೊಂದರ ಕಾಂಪೌಂಡ್ ಮೇಲೆ ಬರೆದಿರುವ ಗೋಡೆ ಬರಹವನ್ನು ಗೋಣಿಕೊಪ್ಪಲು ಶಾಖೆಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ ಎಂದು ವೀರಾಜಪೇಟೆ ತಾಲೂಕು ಧರ್ಮ ಜಾಗೃತಿ ಸಮಿತಿ ಸಂಚಾಲಕ ಮುರುಗೇಶ್ ತಿಳಿಸಿದ್ದಾರೆ. ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಕೃತ್ಯದ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದರು. ನವೆಂಬರ್ 26, 2008 ರಂದು ದೇಶ ಕಂಡ ಕರಾಳ ದಿನವಾಗಿ ಪಾಕಿಸ್ಥಾನದ ಉಗ್ರರ ಕೃತ್ಯದಿಂದ ಮುಂಬೈ ಮಹಾನಗರದಲ್ಲಿ ಸೈನಿಕರು, ಪೆÇಲೀಸರು ಸೇರಿ ಹಲವು ಜನ ಮೃತಪಟ್ಟ ಶೋಕದ ದಿನವಾಗಿದೆ. ಇಂತಹ ದಿನದಂದು ದೇಶ ಶ್ರದ್ಧಾಂಜಲಿ ಸಲ್ಲಿಸಲು ಮುಂದಾಗಿದ್ದರೆ, ದೇಶದ್ರೋಹಿಗಳು ದೇಶ ವಿರೋಧಿ ಚಟುವಟಿಕೆಗೆ ಬೆಂಬಲವಾಗಿ ಗೋಡೆ ಬರಹವನ್ನು ಬರೆದಿರುವುದು ವಿಷಾದನೀಯ ಮತ್ತು ದೇಶದ್ರೋಹ ವಾಗಿದೆ. ಇಂತಹವರನ್ನು ಬಂಧಿಸುವ ಮೂಲಕ ದೇಶಕ್ಕೆ ನ್ಯಾಯ ಒದಗಿಸ ಬೇಕೆಂದು ಘೋಷಣೆಗಳನ್ನು ಕೂಗುವ ಮೂಲಕ ದೇಶದ್ರೋಹಿಗಳ ಕೃತ್ಯವನ್ನು ಖಂಡಿಸಲಾಯಿತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಂಚಾಲಕ ಶಿನೋಜ್ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.