ಸೋಮವಾರಪೇಟೆ, ಡಿ. 2: ಇಲ್ಲಿನ ವಾಕರ್ಸ್ ವಿಂಗ್ನ ವಾರ್ಷಿಕ ಮಹಾಸಭೆ ಸಮೀಪದ ಕೊತ್ತನಳ್ಳಿ ಗ್ರಾಮದ ಆಯಿಂದ್ರ ಸಭಾಂಗಣದಲ್ಲಿ ಜರುಗಿತು. ನೂತನ ಸಾಲಿನ ಅಧ್ಯಕ್ಷರಾಗಿ ಎನ್.ಎನ್. ರಮೇಶ್ ಆಯ್ಕೆಯಾಗಿ, ನಿರ್ಗಮಿತ ಅಧ್ಯಕ್ಷ ಬಿ.ಟಿ. ತಿಮ್ಮಶೆಟ್ಟಿ ಅವರಿಂದ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಡಿ.ವಿ. ಉದಯರವಿ, ಕಾರ್ಯದರ್ಶಿಯಾಗಿ ಎಸ್.ಡಿ. ವಿಜೇತ್, ಖಜಾಂಚಿಯಾಗಿ ಬಿ.ಕೆ. ಉದಯ್ಕುಮಾರ್ ಆಯ್ಕೆಯಾದರು.
ಕ್ರೀಡೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹೆಚ್ಚು ಪಾಲ್ಗೊಳ್ಳಬೇಕೆಂದು ಅಧ್ಯಕ್ಷರು ಮನವಿ ಮಾಡಿದರು. ಸಭೆಯಲ್ಲಿ ಪದಾಧಿಕಾರಿಗಳಾದ ಬಿ.ಎಸ್. ಸುಂದರ್, ಹೆಚ್.ಸಿ. ನಾಗೇಶ್, ಪಿ.ಕೆ. ರವಿ, ಬಿ.ಸಿ. ವೆಂಕಟೇಶ್, ಪಿ. ನಾಗೇಶ್, ಎ.ಸಿ. ಶಿವಪ್ರಸಾದ್, ದಿನೇಶ್ ಬೆಳ್ಳಿಯಪ್ಪ, ಹೆಚ್.ಬಿ. ಹೃಷಿಕೇಶ್, ಶ್ರೀಹರ್ಷ, ಎಸ್.ಬಿ. ಲೀಲಾರಾಂ, ಬಿ.ಎಂ. ದಿನೇಶ್ ಅವರುಗಳು ಉಪಸ್ಥಿತರಿದ್ದರು.