ಕೂಡಿಗೆ, ಡಿ. 2: ಇಲ್ಲಿಗೆ ಸಮೀಪದ ಯಡವನಾಡು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿರುವ ಹತ್ತಕ್ಕೂ ಹೆಚ್ಚು ಕಾಡಾನೆಗಳು ಭತ್ತದ ಗದ್ದೆಗಳಿಗೆ ಧಾಳಿ ಮಾಡಿ ಭಾರೀ ನಷ್ಟಪಡಿಸಿವೆ.
ಯಡವನಾಡು ಗ್ರಾಮ ಉಮೇಶ್ ರಾಜ್ ಅರಸ್ ಎಂಬವರ ಗದ್ದೆಗಳಲ್ಲಿ ಬೆಳೆಸಲಾಗಿದ್ದ ಭತ್ತ, ಸುವರ್ಣ ಗೆಡ್ಡೆ, ಗೆಣಸುಗಳನ್ನು ಕಾಡಾನೆಗಳು ತಿಂದು, ತುಳಿದು ನಷ್ಟಪಡಿಸಿವೆ. ಅರಣ್ಯ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡಬೇಕೆಂಬದು ಈ ವ್ಯಾಪ್ತಿಯ ಗ್ರಾಮಸ್ಥರ ಆಗ್ರಹವಾಗಿದೆ.