ಗೋಣಿಕೊಪ್ಪ ವರದಿ, ಡಿ. 2: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಮಾನಿಲ್ ಕೊಡವ ಕೂಟ ಸಹಯೋಗದಲ್ಲಿ ಮಾಯಮುಡಿ ಗ್ರಾಮದಲ್ಲಿರುವ ಕೂಟತ್‍ಮಾವ್ ಮಂದ್‍ನಲ್ಲಿ ತಾ. 3 ರಂದು (ಇಂದು) ಪುತ್ತರಿ ಮಂದ್ ನಮ್ಮೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಳಿಗ್ಗೆ 10.30 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುದೀರ್ ಉದ್ಗಾಟಿಸಲಿದ್ದಾರೆ. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಮಾಜಿ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ, ಹಿರಿಯರಾದ ಚೆಪ್ಪುಡೀರ ಕಿಟ್ಟು, ಚೆಪ್ಪುಡೀರ ರಾಧಾ ಅಚ್ಚಯ್ಯ, ಅಮ್ಮತ್ತೀರ ರೇವತಿ ಪರಮೇಶ್ವರ ಪಾಲ್ಗೊಳ್ಳಲಿದ್ದಾರೆ.
ಪುತ್ತರಿ ನಮ್ಮೆ ಮಂದ್ ಮಾನಿರ ಬೀರ್ಯ ವಿಷಯದಲ್ಲಿ ಮದೇಟೀರ ಬೆಳ್ಯಪ್ಪ ವಿಚಾರ ಮಂಡನೆ ಮಾಡಲಿದ್ದಾರೆ. ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ಕೊಡವ ಸಾಹಿತ್ಯ ಅಕಾಡೆಮಿ ಪ್ರಕಟಣೆ ತಿಳಿಸಿದೆ.