ಮಡಿಕೇರಿ, ಡಿ. 2: ಮಡಿಕೇರಿ ತಾಲೂಕಿನ ಅರ್ವತ್ತೊಕ್ಲು ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಪುತ್ತರಿ ಹಬ್ಬವನ್ನು ಆಚರಿಸಲಾಯಿತು.
ಗ್ರಾಮದ ತಕ್ಕ ಕುಟುಂಬಗಳು ಒಂದಾಗಿ ಸೇರಿ ಕದಿರು ತೆಗೆಯುವುದು ಇಲ್ಲಿನ ಸಂಪ್ರದಾಯ. ಊರು ತಕ್ಕ ತೆನ್ನೀರಾ, ನಾಡ್ ತಕ್ಕ ಮುಂಜಾಂದಿರ ಹಾಗೂ ಭಂಡಾರ ತಕ್ಕ ಪೆÇಡೆಯಂಡ ಕುಟುಂಬದ ಸದಸ್ಯರು ಕುಟುಂಬದ ಕುತ್ತಿಕಾರ ಮತ್ತು ತಳಿಯತ್ ಬೊಳಿಯಾಗಿ ಊರ್ ಮಂದ್ನಲ್ಲಿ ಸೇರಿ ಇಗ್ಗುತಪ್ಪ ದೇವರಿಗೆ ಅರ್ಪತೆರೆ ಹಾಕಿ ಪೆÇಲಿ ಪೆÇಲಿ ದೇವಾ ಘೋಷಣೆಯೊಂದಿಗೆ ಗದ್ದೆಗೆ ತೆರಳಿ ಕದಿರು ತೆಗೆದು ನಂತರ ಪೆÇವ್ವದಿ ದೇವತೆಯ ನೆಲೆಗೆ ತೆರಳಿ ಅಲ್ಲಿ ಪೆÇವ್ವದಿಗೆ ಕದಿರು ಕೊಯ್ದು ಐನ್ಮನೆಯಲ್ಲಿ ಏಳಕ್ಕಿ ಪುಟ್ಟ್ ಎಂಬ ಪವಿತ್ರ ನೈವೇದ್ಯ ಸ್ವೀಕರಿಸಿದರು. ಕುತ್ತಿಕಾರರಾದ ತೆನ್ನೀರಾ ಕುಶ, ಮುಂಜಾಂದಿರ ಪೆÇನ್ನಪ್ಪ, ಪೆÇಡೆಯಂಡ ಪಳಂಗಪ್ಪ ಮತ್ತು ಕುಟುಂಬದ ಪ್ರಮುಖರಾದ ತೆನ್ನೀರಾ ಮೈನಾ, ಮುಂಜಾಂದಿರ ಮಾಚಯ್ಯ, ವಾಸು ನಾಣಯ್ಯ, ಸತ್ಯ ಬೋಪಯ್ಯ, ತೆನ್ನೀರಾ ಬೆಳ್ಯಪ್ಪ, ದೇವಯ್ಯ, ಪೆಮ್ಮಯ್ಯ, ಮುಂಜಾಂದಿರ ಪೂಣಚ್ಚ, ಪೆÇಡೆಯಂಡ ಸುಬ್ಬಯ್ಯ ಸೇರಿದಂತೆ ಮೂರು ಕುಟುಂಬದ ಸದಸ್ಯರು, ಮಹಿಳೆಯರು, ಮಕ್ಕಳು ಶ್ರದ್ಧೆಯಿಂದ ಪಾಲ್ಗೊಂಡು ಸಂಭ್ರಮಿಸಿದರು.