ಕೂಡಿಗೆ, ಡಿ. 2: ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಕೂಡಿಗೆ ಸರ್ಕಲ್ ಮತ್ತು ಹಳೆ ಕೂಡಿಗೆ ಗ್ರಾಮದ ಮುಂಭಾಗದ ಎರಡೂ ಕಡೆಗಳಲ್ಲಿ ನೂತನ ಹೈಮಾಸ್ಟ್ ದೀಪಸ್ತಂಭಗಳನ್ನು ಅಳವಡಿಸುವ ಕಾರ್ಯ ಆರಂಭಗೊಂಡಿದೆ.
ಹಾಸನ ಹೆದ್ದಾರಿ ಮತ್ತು ಸೋಮವಾರಪೇಟೆ ಕಡೆಗೆ ಹೋಗುವ ವೃತ್ತದಲ್ಲಿ ಪ್ರಮುಖವಾಗಿ ರಾತ್ರಿಯ ಸಮಯದಲ್ಲಿ ಬೆಳಕಿಗೆ ತೊಂದರೆ ಯಿಂದಾಗಿ ವಾಹನ ಚಾಲನೆ ತೊಂದರೆ ಹಾಗೂ ಅಪಘಾತವಾಗುತ್ತಿದ್ದವು. ಅದನ್ನು ಮನಗಂಡ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ವರದರಾಜ್ ಸೂಚನೆ ಮೇರೆಗೆ ಅಭಿವೃದ್ಧಿ ಅಧಿಕಾರಿ ಆಯಿಷಾ ಎರಡು ಹೈಮಾಸ್ಟ್ ದೀಪಗಳನ್ನು ಅಳವಡಿಸುವ ಕ್ರಿಯಾ ಯೋಜನೆಯನ್ನು ತಯಾರಿಸಿ, ಕಾಮಗಾರಿಯನ್ನು ಪ್ರಾರಂಭಿಸಿದ್ದಾರೆ.