ಕುಶಾಲನಗರ, ಡಿ. 2: ಜಿಲ್ಲಾಮಟ್ಟದ ಫುಟ್ಬಾಲ್ ಟೂರ್ನಿಯಲ್ಲಿ ರಂಗಸಮುದ್ರದ ಯುನಿವರ್ಸಲ್ ತಂಡ ಕುಶಾಲನಗರದ ಕೆಎಫ್ಸಿ ತಂಡವನ್ನು 1-0 ಗೋಲುಗಳಿಂದ ಪರಾಭವಗೊಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟೂರ್ನಿಯ ರನ್ನರ್ ಅಪ್ ಆಗಿ ಕುಶಾಲನಗರದ ಕೆಎಫ್ಸಿ, ತೃತೀಯ ಸ್ಥಾನವನ್ನು ಕುಶಾಲನಗರದ ಕೆಎಫ್ಸಿ ಬಿ ತಂಡ, ನಾಲ್ಕನೇ ಸ್ಥಾನವನ್ನು ಶನಿವಾರಸಂತೆಯ ಶಾಕರ್ಸ್ ತಂಡ ಪಡೆದುಕೊಂಡಿದೆ.
ರಂಜಿತ್ ಫ್ರೆಂಡ್ಸ್ ಅಟಾಕರ್ಸ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆ ಆಶ್ರಯದಲ್ಲಿ ಕುಶಾಲನಗರದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಮೂರು ದಿನಗಳ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಟೂರ್ನಿಯ ಉತ್ತಮ ತಂಡವಾಗಿ ಅಮ್ಮತ್ತಿಯ ಸಿಎಫ್ಸಿ ತಂಡ ಬಹುಮಾನ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ರಂಜಿತ್ ಫ್ರೆಂಡ್ಸ್ ಅಟಾಕರ್ಸ್ ಹಾಗೂ ಅಂಬೇಡ್ಕರ್ ಜನಪರ ವೇದಿಕೆ ಕೊಡಗು ಜಿಲ್ಲಾ ಘಟಕದ ವತಿಯಿಂದ ವಿಶೇಷಚೇತನರಿಗೆ ಪೆÇ್ರೀತ್ಸಾಹ ಧನ ಮತ್ತು ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ವಿ.ಪಿ. ಶಶಿಧರ್, ಪಟ್ಟಣ ಪಂಚಾಯಿತಿ ಸದಸ್ಯ ವಿ.ಎಸ್ ಆನಂದ್ಕುಮಾರ್, ನಗರ ಬಿಜೆಪಿ ಅಧ್ಯಕ್ಷ ವಿ.ಎನ್. ಉಮಾಶಂಕರ್, ಜೆಡಿಎಸ್ ಮುಖಂಡರಾದ ಹೆಚ್.ಟಿ. ವಸಂತ್, ಹೆಚ್.ಎಂ. ಚಂದ್ರು, ಕುಶಾಲನಗರ ಪ್ರೆಸ್ಕ್ಲಬ್ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ. ರಘು, ಅಂಬೇಡ್ಕರ್ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಜಯಪ್ರಕಾಶ್, ಉಪಾಧ್ಯಕ್ಷ ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಜೈನುಲ್ ಆಬಿದ್, ಮಹಿಳಾ ಘಟಕದ ಅಧ್ಯಕ್ಷೆ ಫಾತಿಮಾ, ತಾಲೂಕು ಅಧ್ಯಕ್ಷ ಕೆ. ಆದಮ್, ನಗರಾಧ್ಯಕ್ಷ ಶರಣ್ ಕುಮಾರ್, ವಿನ್ಸೆಂಟ್ ಮತ್ತು ಸಂಘಟನೆಯ ಪದಾಧಿಕಾರಿಗಳು ಇದ್ದರು.