ಚೆಟ್ಟಳ್ಳಿ, ಡಿ. 2: ಕೊಡಗಿನ ಸಾಂಪ್ರದಾಯಿಕ ಪುತ್ತರಿ ನಮ್ಮೆ ಆಚರಣೆ ಹಿನ್ನೆಲೆ ಚೆಟ್ಟಳ್ಳಿ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಪುತ್ತರಿ ಧಾರೆ ಪೂಜೆ ಸಲ್ಲಿಸಲಾಯಿತು. ದೇವಾಲಯ ಸಮಿತಿಯ ಅಧ್ಯಕ್ಷ ಮುಳ್ಳಂಡ ಪ್ರಭ ತಿಮ್ಮಯ್ಯ ಮಾತನಾಡಿ, ಕೊಡಗಿನ ಸಾಂಪ್ರದಾಯಿಕ ಆಚರಣೆಯಾದ ಪುತ್ತರಿ ನಮ್ಮೆಯನ್ನು ಆಚರಿಸುವ ಮೂಲಕ ಧಾನ್ಯಲಕ್ಪ್ಮಿಯನ್ನು ಮನೆಗೆ ತರುವ ಸಂಪ್ರದಾಯ ಆಚರಿಸಲಾಗುತ್ತಿದೆ ಎಂದರು. ಊರಿನವರು ಭಾಗವಹಿಸಿದ್ದರು.ಅಯಾಮದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಕರುಣಾಕರ ನಿಡಿಂಜಿ ಮತ್ತು ಸದಸ್ಯ ಸಂಚಾಲಕರಾದ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ ಅವರು ಸಂಶೋಧನಾ ಸಹಾಯಕರಿಗೆ ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಪ್ರೇಮಾ ರಾಘವಯ್ಯ ಚೊಕ್ಕಾಡಿ, ಧನಂಜಯ ಅಗೋಳಿಕಜೆ ಮತ್ತು ಭರತೇಶ ಅಲಸಂಡೆಮಜಲು ಭಾಗವಹಿಸಿದ್ದರು.