ಮಡಿಕೇರಿ, ಡಿ. 2: ಭಾರತೀಯ ಭೂಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿರುವ ಚೆನ್ನೀರ ಬನ್ಸಿ ಪೆÇನ್ನಪ್ಪ (ಎವಿಎಸ್‍ಎಂ, ವಿಎಸ್‍ಎಂ) ಅವರು ಜಲಂಧರ್‍ನಲ್ಲಿರುವ ಭಾರತೀಯ ಭೂಸೇನೆಯ 11 ಕಾಪ್ರ್ಸ್ ಕಮಾಂಡರ್ ಆಗಿ ನೇಮಕಗೊಂಡಿದ್ದಾರೆ.ಜಮ್ಮುವಿನ ಉಧಾಂಪುರದಲ್ಲಿ ಉತ್ತರ ವಲಯದ ಕಚೇರಿಯಲ್ಲಿ ಚೀಫ್ ಆಫ್ ಸ್ಟಾಫ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬನ್ಸಿ ಪೆÇನ್ನಪ್ಪ ಅವರು, ತಮ್ಮ ಸಾಧನೆಯ ಹಾದಿಯಲ್ಲಿ ಮತ್ತೊಂದು ಮೆಟ್ಟಿಲು ಕ್ರಮಿಸಿದ್ದಾರೆ.ಈಗಾಗಲೇ ವರದಿಯಾಗಿರುವಂತೆ ಭಾರತೀಯ ಭೂಸೇನೆಯಲ್ಲಿ ಇಬ್ಬರು ಲೆಫ್ಟಿನೆಂಟ್ ಜನರಲ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಲೆಫ್ಟಿನೆಂಟ್ ಜನರಲ್ ಕೋದಂಡ ಪೂವಯ್ಯ ಕಾರ್ಯಪ್ಪ(ಎವಿಎಸ್‍ಎಂ, ಎಸ್‍ಎಂ, ವಿಎಸ್‍ಎಂ) ಅವರು ಮಥುರಾದಲ್ಲಿರುವ ಭಾರತೀಯ ಭೂಸೇನೆಯ 1 ಕಾಫ್ರ್ಸ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರಿಬ್ಬರ ಸಾಧನೆಯಿಂದ ಕೊಡಗು ದೇಶಿಯ ಮಟ್ಟದಲ್ಲಿ ತನ್ನ ವೀರಪರಂಪರೆ ತ್ಯಾಗ ಬಲಿದಾನಗಳ ಪರಂಪರೆಯಲ್ಲಿ ಮತ್ತಷ್ಟು ಸೇನಾ ಸಾಧಕರ ಗರಿಗಳನ್ನು ಹೊಂದಿದಂತಾಗಿದೆ.