ಸಿದ್ದಾಪುರ, ಡಿ. 2: ಅಕ್ರಮವಾಗಿ ಜೂಜಾಡುತಿದ್ದ 6 ಮಂದಿಯನ್ನು ಸಿದ್ದಾಪುರ ಪೆÇಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಚೆನ್ನಯ್ಯನಕೋಟೆ ಗ್ರಾಮದಲ್ಲಿ ಅಕ್ರಮವಾಗಿ ಜೂಜಾಡುತಿದ್ದ ಅಡ್ಡೆಗೆ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಜೂಜಾಟದಲ್ಲಿ ತೊಡಗಿದ್ದ ಚೆನ್ನಯ್ಯನಕೋಟೆ ಹಾಗೂ ಚೆನ್ನಂಗಿ ಗ್ರಾಮದ ನಿವಾಸಿಗಳಾದ ಕೆ.ಎಂ ಉಬೈದ್, ವೈ.ಆರ್. ಮಾದಪ್ಪ, ರಾಜಣ್ಣ ,ಪಿ.ಬಿ ಚಂದ್ರ ಹಾಗೂ ಪಾಲಿಬೆಟ್ಟದ ನಿವಾಸಿಗಳಾದ ಮುಜೀಬ್, ವಿನೋದ್ ಇವರುಗಳನ್ನು ಪೆÇಲೀಸರು ಬಂಧಿಸಿದ್ದಾರೆ. ಇನ್ನೂ ಕೆಲವು ಆರೋಪಿಗಳು ಪರಾರಿಯಾಗಿದ್ದಾರೆ ಅಕ್ರಮ ಜೂಜಾಟಕ್ಕೆ ಬಳಸಿದ್ದ ವಾಹನವನ್ನು ಹಾಗೂ ಪಣಕ್ಕಿಟ್ಟಿದ ಹಣವನ್ನು ಪೆÇಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.