ಮಡಿಕೇರಿ, ಡಿ. 2: “ಪರ್ವತಾ ರೋಹಣವೇ ಜೀವನ ಹಾಗೂ ಪರ್ವತಗಳು ನನ್ನ ವಾಸ್ತವ್ಯ ಮತ್ತು ಭವಿಷ್ಯವಾಗಿವೆ,” ಎಂದು ಕೊಡಗಿನ ಪರ್ವತಾರೋಹಿ ಮೇಘನಾ ಕುಶಾಲಪ್ಪ ‘ಶಕ್ತಿ’ಯೊಂದಿಗೆ ಹಂಚಿಕೊಳ್ಳುತ್ತಾರೆ. ಅಮ್ಮತಿ ಮೂಲದ ಮೇಘನಾ, ಹೆಸರಾಂತ ಚಾರಣ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಅಲ್ಲದೆ, ಹಲವಾರು ಹವ್ಯಾಸಿ ಪರ್ವತಾರೋಹಿಗಳನ್ನು ಚಾರಣಗಳಲ್ಲಿ ಮುನ್ನಡೆಸಿದ ಮಹಿಳಾ ಚಾರಣ ನಾಯಕಿಯರಲ್ಲಿ ಒಬ್ಬರಾಗಿದ್ದಾರೆÉÉ. ಆದರೆ, ಕೊರೊನಾ ನಂತರದ ಲಾಕ್‍ಡೌನ್ ಸಮಂiÀiದಲ್ಲಿ ಮೇಘನಾ ಕೆಲಸ ನಿರ್ವಹಿಸುತ್ತಿದ್ದ ಚಾರಣ ಕಂಪೆನಿ ಮೇಘನಾಳನ್ನು, ಇನ್ನೂ ಹಲವಾರು ಕಂಪನಿಯ ನೌಕರರನ್ನು ಕೆಲಸದಿಂದ ವಜಾ ಮಾಡಿತು. ಇದು ಮೊದಲು ಆಘಾತಕಾರಿ ಎನಿಸಿದರೂ, ಕ್ರಿಯಾಶೀಲೆ ಮೇಘನಾಳಿಗೆ ಈ ಸಂದಿಗ್ಧ ಸನ್ನಿವೇಶ ಹೊಸ ಅವಕಾಶಗಳನ್ನು ತೆರೆಯಿತು. ಮೇಘನಾ ಈಗ ಉತ್ತರಾಖಂಡದಿಂದ ತನ್ನ ಸಹೋದ್ಯೋಗಿ ಗೌತಮ್ ಥಾಂಪ್ಲಿಯಲ್ ಜೊತೆಗೆ ‘ಟ್ರೆಕ್ಸ್ ಎನ್ ಟೇಲ್ಸ್’ (ಖಿಡಿeಞs ಓ ಖಿಚಿಟes) ಸಾಹಸ ಕಂಪನಿಯನ್ನು ಸಹ-ಸ್ಥಾಪಿಸಿದ್ದಾಳೆ ಮತ್ತು ಕಂಪನಿಯು ಉತ್ತರಾಖಂಡದ ಶಿಖರಗಳಲ್ಲಿ ಸಾಹಸ ಉತ್ಸಾಹಿಗಳಿಗೆ ಮಾರ್ಗದರ್ಶನ ನೀಡಲು ಪ್ರಾರಂಭಿಸಿದೆ.

“ನಾನು ನನ್ನ ಹಿಂದಿನ ಚಾರಣ ಕಂಪೆÀನಿಯೊಂದಿಗೆ ಕೆಲಸ ಮಾಡಿದ ಸಂದರ್ಭ, ನನಗೆ ಪರ್ವತಗಳ ಬಗೆಗೆ ಸಾಕಷ್ಟು ಅನುಭವ ದೊರೆತಿದೆ. ಲಾಕ್‍ಡೌನ್‍ಗಿಂತ

(ಮೊದಲ ಪುಟದಿಂದ) ಮುನ್ನ, ನಾನು ಸ್ವಂತವಾಗಿ ಏನನ್ನಾದರೂ ಪ್ರಾರಂಭಿಸುವ ಬಗ್ಗೆ ಯೋಚಿಸಿರಲಿಲ್ಲ. ಆದರೆ ಕಂಪೆÀನಿಯಿಂದ ನಮ್ಮಲ್ಲಿ ಅನೇಕರನ್ನು ಕೆಲಸದಿಂದ ತೆಗೆದುಹಾಕಲಾಯಿತು. ಗೌತಮ್ ಮತ್ತು ನಾನು ಇದನ್ನು ಒಂದು ಸವಾಲಾಗಿ ತೆಗೆದುಕೊಂಡೆವು; ಅಕ್ಟೋಬರ್‍ನಲ್ಲಿ ನಾವು ‘ಟ್ರೆಕ್ಸ್ ಎನ್ ಟೇಲ್ಸ್’ ಅನ್ನು ಪ್ರಾರಂಭಿಸಿದೆವು,”ಎಂದು ಮೇಘನಾ ವಿವರಿಸಿದರು. ಹೊಸದಾಗಿ ನೋಂದಾಯಿತ ಚಾರಣ ಕಂಪೆÀನಿಯು ಉತ್ತರಾಖಂಡದಲ್ಲಿ ಚಾರಣಗಳನ್ನು ಇದೀಗ ಪ್ರಾರಂಭಿಸಿದೆ.

ಬೇಸಿಕ್ ಹಾಗೂ ಅಡ್‍ವಾನ್ಸ್ ಮೌಂಟೆನೇರಿಂಗ್ ಕೋರ್ಸ್‍ಗಳ ಪ್ರಮಾಣೀಕರಣವನ್ನು ಹೊಂದಿರುವ ಮೇಘನಾ ಅವರ ಚಾರಣ ಬಗೆಗಿನ ಉತ್ಸಾಹ ಸುಮಾರು ಎಂಟು ವರ್ಷಗಳ ಹಿಂದೆ ಪ್ರಾರಂಭವಾಯಿತು. ಕೊಡಗಿನÀಲ್ಲಿ ಹವ್ಯಾಸÀ ಚಟುವಟಿಕೆಯಾಗಿ ಪ್ರಾರಂಭವಾದ ಚಾರಣಗಳು, ಶೀಘ್ರದಲ್ಲೇ ವೃತ್ತಿಪರ ತಿರುವು ಪಡೆದುಕೊಂಡಿತು. ಮೇಘನಾ ಮೂರು ಪ್ರಮುಖ ಶೃಂಗಗಳನ್ನು - ಲಡಾಕ್‍ನಲ್ಲಿ ಸ್ಟೋಕ್ ಕಾಂಗ್ರಿ (20,187 ಅಡಿ), ಪಿರ್ ಪಂಜಾಲ್ ಶ್ರೇಣಿಯಲ್ಲಿ ಫ್ರೆಂಡ್‍ಶಿಪ್ ಪೀಕ್ (17,353 ಅಡಿ) ಮತ್ತು ಸಿಕ್ಕಿಂನಲ್ಲಿ ರೆನೋಕ್ ಪೀಕ್ (15,500 ಅಡಿ) - ಪೂರ್ಣಗೊಳಿಸಿದ್ದಾರೆ.É ಅಲ್ಲದೆ ಹಲವಾರು ಇತರ ಶಿಖರಗಳನ್ನು ಏರಿಳಿದಿರುತ್ತಾರೆÉ. “ನಾನು ಆಯ್ಕೆ ಮಾಡಿರುವ ಉದ್ಯೋಗ ಖಂಡಿತವಾಗಿಯೂ ಸವಾಲಿನ ಕೆಲಸವಾಗಿದೆ. ಸಾಹಸ ಕ್ರೀಡೆಯು ಹೆಚ್ಚಾಗಿ ಪುರುಷ ಪ್ರಾಬಲ್ಯವನ್ನು ಹೊಂದಿದೆ . ಅಲ್ಲದೆ, ಒಬ್ಬಳು ಹೆಣ್ಣು ಚಾರಣ ನಾಯಕಿ ಅಥವಾ ಪರ್ವತ ಮಾರ್ಗದರ್ಶಿಯಾಗಿ ಹೆಸರುಗಳಿಸುವದು ಸುಲಭವಲ್ಲ. ನಮ್ಮ ದೈಹಿಕ ದಾಢ್ರ್ಯತೆಯನ್ನು ಆಧರಿಸಿ ಸಹಚಾರಣಿಗರು ಮೊದಲು ನಮ್ಮ ಮಾರ್ಗದರ್ಶನದ ಕುರಿತು ನಿರ್ಣಯಿಸುತ್ತಾರೆ - ನಾವು ಎಷ್ಟ್ಟು ಪ್ರಬಲವಾಗಿದ್ದೀವಿ ಎಂಬುದರ ಮೇಲೆ ಹೆಚ್ಚಿನವರಿಗೆ ಸಂಶಯವಿರುತ್ತದೆ. ಅವರು ಹೆಚ್ಚಾಗಿ ಸಂಶಯ ವ್ಯಕ್ತಪಡಿಸುತ್ತಾರೆ ಮತ್ತು ತಂಡವನ್ನು ಸುರಕ್ಷಿತವಾಗಿ ಮುನ್ನಡೆಸಲು ನನಗೆ ಸಾಧ್ಯವಿದೆಯೇ ಎಂದು ಆಶ್ಚರ್ಯ ಪಡುತ್ತಾರೆ,” ಎಂಬುದನ್ನು ಮೇಘನಾ ವಿವರಿಸಿದರು. ಆದರೆ ಈಗ ಸುಮಾರು ಮೂರು ವಷರ್Àಗಳಿಂದ ವೃತ್ತಿಯಲ್ಲಿರುವ ಮೇಘನಾ ತಾನು ಮುನ್ನಡೆಸುವ ಚಾರಣಿಗರ ವಿಶ್ವಾಸ ಗಳಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆÉ. ಹಿಮಾಲಯ, ಹಿಮಾಚಲ ಪರ್ವತ ಶ್ರೇಣಿಗಳಲ್ಲಿ ಹವಾಮಾನ ಪರಿಸ್ಥಿತಿಗಳೂ ದೊಡ್ಡ ಸವಾಲಾಗಿರುತ್ತದೆ ಎಂದು ತಿಳಿಸಿದ ಮೇಘನಾ, ಈ ಎಲ್ಲಾ ಸವಾಲುಗಳು ಕ್ಷಣಿಕಮಾತ್ರವಾಗಿರುತ್ತವೆ ಎನ್ನುತ್ತಾರೆ

“ಪರ್ವತಗಳ ಬಗೆಗಿನ ನನ್ನ ಉತ್ಸಾಹ ನನಗೆ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ನೀಡಿದೆ. ನನ್ನ ವ್ಯಕ್ತಿತ್ವಕ್ಕೆ ಈ ಕ್ಷೇತ್ರ ಮಹತ್ತರ ಬಲ ತುಂಬಿದೆ. ಜನರು ಪರ್ವತಗಳ ಮೇಲೆ ಸಾಯುವುದನ್ನು ನಾನು ನೋಡಿದ್ದೇನೆ ಮತ್ತು ಜನರನ್ನು ಪರ್ವತಗಳ ಮೇಲೆ ನಾನು ರಕ್ಷಿಸಿದ್ದೇನೆ. ಪರ್ವತಗಳು ನನ್ನನ್ನು ಒಂದು ಪ್ರಬಲ ವ್ಯಕ್ತಿಯಾಗಿ ರೂಪಿಸಿವೆ” ಎಂದು ಮೇಘನಾ ತನ್ನ ಯಶೋಗಾಥೆ ಕುರಿತು ಮಾಹಿತಿಯಿತ್ತರು. -ವರದಿ : ಪ್ರಜ್ಞಾ ಜಿ.ಆರ್.