ಕೂಡಿಗೆ, ಡಿ. 2: ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ, ವಾಹನ ಚಾಲಕರ ಮತ್ತು ಗ್ರೂಪ್ ಡಿ ನೌಕರರ ಸಂಘ ಇದರ ಸೋಮವಾರಪೇಟೆ ತಾಲೂಕು ಘಟಕದ 2020- 21ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ ತಾ. 3 ರಂದು (ಇಂದು) ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ನ ಸಭಾಂಗಣದಲ್ಲಿ ನಡೆಯಲಿದೆ

ಕಾರ್ಯಕ್ರಮ ಅಧ್ಯಕ್ಷತೆಯನ್ನು ತಾಲೂಕು ಬೋಧಕೇತರ ನೌಕರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ನೆರವೇರಿಸಲಿದ್ದಾರೆ. ಗೌರವಾಧ್ಯಕ್ಷ ಕೆ.ಪಿ. ಚನ್ನಪ್ಪ, ಮುಖ್ಯ ಅತಿಥಿಗಳಾಗಿ ಡಯಟ್‍ನ ಉಪನಿರ್ದೆಶಕ ಎ. ಶ್ರೀಧರನ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಡಾ. ಸದಾಶಿವಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.