ಸೋಮವಾರಪೇಟೆ, ಡಿ. 1: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಮ್ಮನಬಾಣೆ ಗ್ರಾಮದಲ್ಲಿ ತಾ.ಪಂ. ಸದಸ್ಯರ ಅನುದಾನದಡಿ ರೂ. 5 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುವ ವಿವಿಧ ಕಾಮಗಾರಿಗಳಿಗೆ ತಾ.ಪಂ. ಸದಸ್ಯ ಬಿ.ಬಿ. ಸತೀಶ್ ಚಾಲನೆ ನೀಡಿದರು.
ತಾಲೂಕು ಪಂಚಾಯಿತಿ ಸದಸ್ಯ ಸತೀಶ್ ಅವರು ವಿವಿಧ ಕಾಮಗಾರಿಗಳಿಗೆ ರೂ. 5 ಲಕ್ಷ ಅನುದಾನ ಒದಗಿಸಿದ್ದು, ರೂ. 3.33ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಾಣ, 1.65 ಲಕ್ಷದಲ್ಲಿ ತಡೆಗೋಡೆ, ಅಂಗನವಾಡಿಯ ಆವರಣ ಗೋಡೆ ನಿರ್ಮಾಣಕ್ಕೆ 75 ಸಾವಿರ, 40 ಸಾವಿರ ವೆಚ್ಚದ ಯಾರ್ಂಪ್ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಗ್ರಾ.ಪಂ. ಮಾಜಿ ಸದಸ್ಯರಾದ ಕೆ.ಎ. ಯಾಕೂಬ್, ಬಸವರಾಜು, ಪ.ಪಂ. ಸದಸ್ಯ ಉದಯಶಂಕರ್, ಪ್ರಮುಖರಾದ ಸೋಮಶೇಖರ್, ಮೀನಾ, ಸುನಿಲ್, ಆನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.