ಸುಂಟಿಕೊಪ್ಪ, ಡಿ. 1: ವರ್ಕ್ಶಾಪ್ ಮಾಲೀಕರ ಸಂಘದ ಸದಸ್ಯ ಕೆ. ಸತೀಶ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ಸಂಘದ ಅಧ್ಯಕ್ಷ ಪಿ.ಆರ್. ಸುನಿಲ್ಕುಮಾರ್ ಮತ್ತು ಪದಾಧಿಕಾರಿಗಳು ಧನ ಸಹಾಯ ನೀಡಿದರು. ಚಿಕಿತ್ಸೆಯ ವೆಚ್ಚಕ್ಕಾಗಿ ರೂ. 10,000 ಧನ ಸಹಾಯ ನೀಡಿದರು. ಈ ಸಂದರ್ಭ ಗೌರವಾಧ್ಯಕ್ಷರುಗಳಾದ ವಿ.ಎ. ಸಂತೋಷ್, ಕೆ.ಪಿ. ವಿನೋದ್, ಪಿ.ಆರ್. ಸುಕುಮಾರ್, ಖಜಾಂಚಿ ಆರ್. ಸತೀಶ್, ಸಮಿತಿ ಸದಸ್ಯರುಗಳಾದ ಬಿ.ಎಸ್. ರಮೇಶ್, ಕೆ.ಜಿ. ಸತೀಶ್, ತಂಗವೇಲು ಮತ್ತಿತರರು ಇದ್ದರು.