ಭಾಗಮಂಡಲ, ಡಿ. 1: ಸಮೀಪದ ಬೇಂಗೂರು ಗ್ರಾಮದ ಮಂದಪಂಡ ಎಂ. ಅಯ್ಯಣ್ಣ ಅವರ ಮನೆಯ ಬಳಿಯ ತೋಟದಲ್ಲಿ ಹೆಬ್ಬಾವೊಂದು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತು. 15 ಅಡಿ ಉದ್ದ ಹಾಗೂ 15 ಕೆ.ಜಿ. ತೂಕದ ಹೆಬ್ಬಾವನ್ನು ಭಾಗಮಂಡಲ ಉಪವಲಯದ ಅರಣ್ಯ ರಕ್ಷಕ ಸಚಿನ್ ಪೋಲೂರು ಸೆರೆ ಹಿಡಿದು ತಲಕಾವೇರಿ ವನ್ಯಜೀವಿ ಧಾಮದಲ್ಲಿ ಬಿಟ್ಟರು. ಕಾರ್ಯಾಚರಣೆಯಲ್ಲಿ ಭಾಗಮಂಡಲ ಉಪವಲಯ ಅರಣ್ಯಾಧಿಕಾರಿಗಳಾಧ ಮಂಜುನಾಥ ನಾಯಕ್, ಸಿ.ಕೆ. ನಂದಿನಿ ಹಾಗೂ ಆರ್ಆರ್ಟಿ ಸಿಬ್ಬಂದಿ ದುರ್ಗ ಮತ್ತಿತರರು ಉಪಸ್ಥಿತರಿದ್ದರು.