ನಾಪೆÇೀಕ್ಲು, ಡಿ. 1: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ದೇವಾಟ್ ಪರಂಬುವಿನಲ್ಲಿ ಟಿಪ್ಪುವಿನಿಂದ ಹತ್ಯೆಯಾದ ವೀರ ಕೊಡವರ ಆತ್ಮಕ್ಕೆ ಶಾಂತಿ ಕೋರುವ ಉದ್ದೇಶದಿಂದ ಹುತ್ತರಿ ಹಬ್ಬದ ಪ್ರಯುಕ್ತ ಸ್ಮಾರಕಕ್ಕೆ ಕದಿರು ಕಟ್ಟಿ ನೈವೇದ್ಯ ಸಮರ್ಪಿಸಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಟಿಪ್ಪುವಿನ ಕುತಂತ್ರದಿಂದ ಹತ್ಯೆಯಾದ ವೀರ ಕೊಡವರ ಆತ್ಮಕ್ಕೆ ಶಾಂತಿ ಕೋರಲು ಪ್ರತೀ ವರ್ಷದಂತೆ ಈ ವರ್ಷವೂ ಸ್ಮಾರಕಕ್ಕೆ ಕದಿರು ಸಮರ್ಪಿಸಿ ಪೂಜೆ ಸಲ್ಲಿಸಲಾಯಿತು ಎಂದರು. ಕಾರ್ಯಕ್ರಮದಲ್ಲಿ ಸಿಎನ್‍ಸಿ ಮುಖಂಡರಾದ ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಅರೆಯಡ ಗಿರೀಶ್, ಪಟ್ಟಮಾಡ ಕುಶ, ನಂದಿನೆರವಂಡ ಪಾರ್ವತಿ, ಪುಲ್ಲೇರ ಧನುಷ್ ಇದ್ದರು.