ಮಡಿಕೇರಿ, ಡಿ. 1: ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ, ಕೊಡಗಿನ ಸುಗ್ಗಿ ಹಬ್ಬವೆಂದೇ ಖ್ಯಾತಿವೆತ್ತಿರುವ ಹುತ್ತರಿ ಹಬ್ಬವನ್ನು ನಾಡಿನಾದ್ಯಂತ ಜನತೆ ಸಂಭ್ರಮದಿಂದ ಆಚರಿಸಿದರು.
ಸತತ ಮೂರು ವರ್ಷಗಳ ಅತಿವೃಷ್ಟಿಯಿಂದ ಕಂಗೆಟ್ಟು ಹಬ್ಬಾಚರಣೆಗಳ ಸಂಭ್ರಮ ಮಾಯವಾಗಿದ್ದು, ಇದೀಗ ಈ ಬಾರಿ ಕೋವಿಡ್ ನಿಯಾಮಾವಳಿಗಳ ನಡುವೆಯೂ ಜನತೆ ಒಂದಿಷ್ಟು ಸಂಭ್ರಮದಿಂದಲೇ ಹಬ್ಬಾಚರಣೆ ಮಾಡಿದರು. ಉತ್ತು, ಬಿತ್ತಿ, ಬೆಳೆದ ಪೈರನ್ನು ಧಾನ್ಯಲಕ್ಷ್ಮಿಯೆಂದು ಮೊದಲು ಮನೆ ತುಂಬಿಸಿಕೊಳ್ಳುವ ಹುತ್ತರಿ ಹಬ್ಬವನ್ನು ಮನೆ - ಮನೆಗಳಲ್ಲಿ ದೇವಾಲಯ, ಸಮಾಜಗಳಲ್ಲಿ ಆಚರಿಸಲಾಯಿತು. ಸಂಪ್ರದಾಯದಂತೆ ನೆರೆ ಕಟ್ಟಿ, ಕದಿರು ತೆಗೆದು, ಪೂಜಿಸಿ, ಮನೆಗಳಿಗೆ ಕೊಂಡೊಯ್ದು ಕದಿರು ಕಟ್ಟಿ ಲಕ್ಷ್ಮಿಯನ್ನು ಪ್ರಾರ್ಥಿಸಲಾಯಿತು. ‘ಪೊಲಿದೇವ.., ಪೊಲಿ, ಪೊಲಿಯೇ ಬಾ’ ಎಂಬ ಸ್ತುತಿಯೊಂದಿಗೆ ಪಟಾಕಿ, ಬಂದೂಕುಗಳ ಗುಂಡಿನ ಸದ್ದು ಎಲ್ಲೆಡೆ ಮಾರ್ದನಿಸಿದವು. ಸಾಂಪ್ರದಾಯಿಕ ಖಾದ್ಯಗಳೊಂದಿಗೆ ಸಹ ಭೋಜನ ಸವಿದು ಎಲ್ಲರ ಮನ ತಣಿಸಿತು.
ಪಾಡಿ ಸನ್ನಿಧಿಯಲ್ಲಿ ಧಾನ್ಯಲಕ್ಷ್ಮಿ ಹಬ್ಬಸಂಪ್ರದಾಯ ಹಾಗೂ ಕಟ್ಟುಪಾಡಿನಂತೆ ಮಳೆದೇವರೆಂದೇ ಖ್ಯಾತಿವೆತ್ತ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ರೋಹಿಣಿ ನಕ್ಷತ್ರದಲ್ಲಿ ಮೊದಲು ನೆರೆಕಟ್ಟಿ, ಕದಿರು ತೆಗೆದ ಬಳಿಕ ಜಿಲ್ಲೆಯಾದ್ಯಂತ ಎಲ್ಲೆಡೆ ಕದಿರು ತೆಗೆಯಲಾಯಿತು.
(ನಾಲ್ಕನೇ ಪುಟದಿಂದ) ಸುಂಟಿಕೊಪ್ಪ : ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಹುತ್ತರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ವಿಶ್ವ ಹಿಂದೂ ಪರಿಷತ್ತು ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ರಾಮ ಮಂದಿರದಲ್ಲಿ ಪೂಜೆ, ಪ್ರಾರ್ಥನೆಯ ನಂತರ ನೆರೆಕಟ್ಟಿ ಸಂಪ್ರದಾಯದಂತೆ ಪಟ್ಟೆಮನೆ ಉದಯ ಕುಮಾರ್ ಅವರ ಗದ್ದೆಯಲ್ಲಿ ಹಿರಿಯರಿಂದ ಪೂಜಾ ಕೈಂಕರ್ಯಗಳು ನಡೆದು ಕದಿರು ತೆಗೆದು ಸಾರ್ವಜನಿಕರಿಗೆ ಹಂಚಲಾಯಿತು. ನಂತರ ದೇವಾಲಯಕ್ಕೆ ಆಗಮಿಸಿ ಪೂಜೆಯೊಂದಿಗೆ ಕದಿರನ್ನು ಕಟ್ಟುವ ಮೂಲಕ ಹಬ್ಬ ಆಚರಿಸಲಾಯಿತು. ಬೇಗೂರು ಈಶ್ವರ ದೇವಾಲಯದಲ್ಲಿ
ಪೆÇನ್ನಂಪೇಟೆ ಸಮೀಪದ ಬೇಗೂರು ಪೂಳೆಮಾಡ್ ಈಶ್ವರ ದೇವಾಲಯದ ವತಿಯಿಂದ ದೇವರ ಗದ್ದೆಯಲ್ಲಿ ಸೋಮವಾರ ಬೆಳಿಗ್ಗೆ ಶ್ರದ್ಧಾಭಕ್ತಿಯಿಂದ ಹುತ್ತರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಸಾರ್ವತ್ರಿಕ ಉತ್ಸವದಂತೆ ಆಚರಿಸಲಾಯಿತು.
ನಂತರ ಮುತ್ತೈದೆಯರು ದೀಪ ಹಿಡಿದು ಮುಂದೆ ಸಾಗಿದಂತೆ ಹಿಂದಿನಿಂದ ದುಡಿಕೊಟ್ಟ್ ಪಾಟ್ ಹಾಡಿಕೊಂಡು ಕತ್ತಿ, ಕೋವಿಗಳೊಂದಿಗೆ ಕದಿರು ತೆಗೆಯುವ ಗದ್ದೆಗೆ ಮಹಿಳೆಯರು ಮತ್ತು ಮಕ್ಕಳು ಸೇರಿ ಊರುನಾಡಿನ ಎಲ್ಲಾ ಸದಸ್ಯರು, ಜನಾಂಗದವರು ಮೆರವಣಿಗೆಯಲ್ಲಿ ಸಾಗಿ ಫಸಲು ತುಂಬಿ ಬಾಗಿ ನಿಂತಿದ್ದ ಭತ್ತದ ತೆನೆಗೆ ಪೂಜೆ ಸಲ್ಲಿಸಿದರು. ಹುತ್ತರಿಯ ವಿಶೇಷ ಖಾದ್ಯಗಳಾದ ತಂಬಿಟ್ಟು, ಅಡಕೆ ಹಿಟ್ಟು, ದೇವರ ಪ್ರಸಾದವನ್ನು ಸ್ವೀಕರಿಸಲಾಯಿತು. ದೇವರ ಕದಿರು ತೆಗೆದ ನಂತರ ಆಯಾಯ ಕುಟುಂಬದ ಐನ್‍ಮನೆಗಳಲ್ಲಿ ಕದಿರು ತೆಗೆದು, ನಂತರ ತಮ್ಮ ತಮ್ಮ ಗದ್ದೆಗಳಲ್ಲಿ ಕದಿರು ತೆಗೆಯಲಾಯಿತು.ರೂ.5 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಚಾಲನೆ ಸೋಮವಾರಪೇಟೆ, ಡಿ. 1: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಮ್ಮನಬಾಣೆ ಗ್ರಾಮದಲ್ಲಿ ತಾ.ಪಂ. ಸದಸ್ಯರ ಅನುದಾನದಡಿ ರೂ. 5 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುವ ವಿವಿಧ ಕಾಮಗಾರಿಗಳಿಗೆ ತಾ.ಪಂ. ಸದಸ್ಯ ಬಿ.ಬಿ. ಸತೀಶ್ ಚಾಲನೆ ನೀಡಿದರು.
ತಾಲೂಕು ಪಂಚಾಯಿತಿ ಸದಸ್ಯ ಸತೀಶ್ ಅವರು ವಿವಿಧ ಕಾಮಗಾರಿಗಳಿಗೆ ರೂ. 5 ಲಕ್ಷ ಅನುದಾನ ಒದಗಿಸಿದ್ದು, ರೂ. 3.33ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಾಣ, 1.65 ಲಕ್ಷದಲ್ಲಿ ತಡೆಗೋಡೆ, ಅಂಗನವಾಡಿಯ ಆವರಣ ಗೋಡೆ ನಿರ್ಮಾಣಕ್ಕೆ 75 ಸಾವಿರ, 40 ಸಾವಿರ ವೆಚ್ಚದ ಯಾರ್ಂಪ್ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಗ್ರಾ.ಪಂ. ಮಾಜಿ ಸದಸ್ಯರಾದ ಕೆ.ಎ. ಯಾಕೂಬ್, ಬಸವರಾಜು, ಪ.ಪಂ. ಸದಸ್ಯ ಉದಯಶಂಕರ್, ಪ್ರಮುಖರಾದ ಸೋಮಶೇಖರ್, ಮೀನಾ, ಸುನಿಲ್, ಆನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ವೀರಾಜಪೇಟೆ ಕೊಡವ ಸಮಾಜದಲ್ಲಿ ಹುತ್ತರಿ
ವೀರಾಜಪೇಟೆ: ವೀರಾಜಪೇಟೆ ಯ ಕೊಡವ ಸಮಾಜದ ವತಿಯಿಂದ ವರ್ಷಂಪ್ರತಿಯಂತೆ ಹುತ್ತರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಪದ್ಧತಿಯಂತೆ ಆಚರಿಸಲಾಯಿತು.
ಹುತ್ತರಿ ಹಬ್ಬದ ಅಂಗವಾಗಿ ಕೊಡವ ಸಮಾಜದ ನೆಲ್ಲಕ್ಕಿಯಲ್ಲಿ ಸಾಂಪ್ರದಾಯಿಕ ಪೂಜೆ ನರೆವೇರಿತು. ಕೊಡವ ಬಾಂಧವರು ಒಮ್ಮತವಾಗಿ ಮೆರವಣಿಗೆಯಲ್ಲಿ ತೆರಳಿ ರಾತ್ರಿ ಏಳು ಮುಕ್ಕಾಲು ಗಂಟೆಗೆ ಕೊಡವ ಸಮಾಜದ ಸಭಾಂಗಣದಲ್ಲಿರುವ ಗದ್ದೆಯಲ್ಲಿ ನೆರೆ ಕಟ್ಟಲಾಯಿತು. ಶಾಸ್ತ್ರೋಕ್ತವಾಗಿ ವಿಧಿ ವಿಧಾನಗಳ ಪೂಜೆ ಪುನಸ್ಕಾರದ ನಂತರ ಎಂಟು ಮುಕ್ಕಾಲು ಗಂಟೆಗೆ ಕದಿರು ತೆಗೆಯಲಾಯಿತು. ಹಿರಿಯರಾದ ಕೂತಂಡ ನಾಣಯ್ಯ ಅವರು ಕುತ್ತಿ ತೆಗೆದರು.
ಗದ್ದೆಯಲ್ಲಿ ಕದಿರು ತೆಗೆದ ನಂತರ ಮೆರವಣಿಗೆಯಲ್ಲಿ ಬಂದ ಕೊಡವ ಕುಟುಂಬಗಳ ಬಾಂಧವರು ನೆಲ್ಲಕ್ಕಿಯಲ್ಲಿ ಕದಿರಿಗೆ ವಿಶೇಷ ಪೂಜೆ ನೆರವೇರಿಸಿದರು. ಈ ಸಂದರ್ಭ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ, ಕಾರ್ಯದರ್ಶಿ ಕುಲ್ಲಚಂಡ ಜಯ ನಾಣಯ್ಯ, ಸಹ ಕಾರ್ಯದರ್ಶಿ ಅಲ್ಲಪಂಡ ಚಿಣ್ಣಪ್ಪ, ಕೊಡವ ಸಮಾಜದ ಮಹಿಳಾ ಪ್ರತಿನಿಧಿಗಳಾದ ಬಿ. ಆಶಾ ಸುಬ್ಬಯ್ಯ, ಪಿ. ಗೀತಾ ಸುರೇಶ್, ಎಂ. ದಮಯಂತಿ ಮತ್ತಿತರರು ಹಾಜರಿದ್ದರು.
ಹುತ್ತರಿ ಹಬ್ಬದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕೊಡವ ಸಮಾಜದ ಹಿರಿಯರು, ಮಾಜಿ ಅಧ್ಯಕ್ಷರು ಆದ ನಾಯಡ ವಾಸು ನಂಜಪ್ಪ ಅವರು ಎಲ್ಲರಿಗೂ ಆಶೀರ್ವದಿಸಿದರು. ನಿನ್ನೆ ದಿನ ರಾತ್ರಿ ನಡೆದ ವೀರಾಜಪೇಟೆ ಕೊಡವ ಸಮಾಜದ ಹುತ್ತರಿ ಹಬ್ಬದಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ಗೌಡ ಸಮಾಜದಲ್ಲಿ ಆಚರಣೆ
ಮಡಿಕೇರಿ ನಗರ ಗೌಡ ನಾಗರಿಕ ಹುತ್ತರಿ ಸಮಿತಿ ವತಿಯಿಂದ ಕೊಡಗು ಗೌಡ ವಿದ್ಯಾಸಂಘದ ಸಭಾಬಾಡೆಯಲ್ಲಿ ಸಮಿತಿಯ ಅಧ್ಯಕ್ಷ ಪರಿವಾರ ಅಪ್ಪಾಜಿ ಅವರ ಮುಂದಾಳತ್ವದಲ್ಲಿ 12ನೇ ವರ್ಷದ ಹುತ್ತರಿ ಹಬ್ಬವನ್ನು ಆಚರಿಸಲಾಯಿತು.
ನೆರೆಕಟ್ಟಿ ರಾತ್ರಿ 8.45ಕ್ಕೆ ಪೊನ್ನಚನ ಮಧು ಸೋಮಣ್ಣ ಕದಿರು ತೆಗೆದರು. ನೆರೆದಿದ್ದ ಸುಮಾರು ನಾಗರಿಕ ಬಾಂಧವರು ಮತ್ತು ಇತರರಿಗೆ ನೆರೆ ಕಟ್ಟಿದ ಕದಿರನ್ನು ವಿತರಿಸಲಾಯಿತು. ಸರ್ವರಿಗೂ ತಂಬಿಟ್ಟು ಫಲಹಾರವನ್ನು ನೀಡಲಾಯಿತು.
ಸಮಾರಂಭದಲ್ಲಿ ಹುತ್ತರಿ ಸಮಿತಿ ಉಪಾಧ್ಯಕ್ಷ ಪಾಣತ್ತಲೆ ಬಿದ್ದಪ್ಪ, ಕಾರ್ಯದರ್ಶಿ ನಡುಮನೆ ಕಾರ್ಯಪ್ಪ, ಖಜಾಂಚಿ ಪೊನ್ನಚನ ಸೋಮಣ್ಣ, ಸಂಚಾಲಕರಾದ ಚೆರಿಯಮನೆ ತಿಮ್ಮಯ್ಯ, ಬೈತಡ್ಕ ಬೆಳ್ಯಪ್ಪ, ಕೋಡಿ ಮುತ್ತಪ್ಪ, ಪೂಜಾರೀರ ಬೆಳ್ಯಪ್ಪ, ಮೊಟ್ಟೇರ ಬೆಳ್ಯಪ್ಪ, ಬೈಚನ ಸೋಮಣ್ಣ, ಪುದಿಯನೆರವನ ರಿಶೀತ್ ಮಾದಯ್ಯ, ಕುಟ್ಟನ ಪ್ರಶಾಂತ್, ಸೂದನ ಹರೀಶ್, ಪೂಜಾರೀರÀ ಸುಮನ್, ಬಂಗಾರಕೋಡಿ ಉದಯಕುಮಾರ್, ಕುಂಡ್ಯನ ಚರಣ್, ಮಾನಡ್ಕ ಬಿಜು, ಪೊನ್ನೇಟಿ ಚಿಣ್ಣಪ್ಪ ಇನ್ನಿತರರು ಸಹಕರಿಸಿದರು.(ಮೊದಲ ಪುಟದಿಂದ) ನಾಪೋಕ್ಲು: ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ, ಕೊಡಗಿನ ಸುಗ್ಗಿ ಹಬ್ಬವಾದ ಹುತ್ತರಿ ಹಬ್ಬವನ್ನು ಶ್ರದ್ಧೆ ಹಾಗೂ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಜಿಲ್ಲೆಯಲ್ಲಿ ಮೊಟ್ಟ ಮೊದÀಲು ಪಾಡಿ ಸನ್ನಿಧಿಯಲ್ಲಿ ಹಬ್ಬ ಆಚರಿಸುವ ಸಂಪ್ರದಾಯ ಹಿಂದಿನಿಂದಲೇ ನಡೆದುಬಂದಿದೆ.
ಸಂಪ್ರದಾಯದಂತೆ ಪೊಂಗೆರ, ಕನಿಯಂಡ, ಕೋಲೆಯಂಡ, ಬೊಳ್ಳನಮಂಡ ಮತ್ತು ಐರಿರ ಮನೆಯವರು ಹುತ್ತರಿ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಊರಿನವರು, ಪರವೂರಿನ ಭಕ್ತರು ಕೂಡಾ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಮುಖ ಐದು ಮನೆತನದ ಕುಟುಂಬದ ಹೆಣ್ಣು ಮಕ್ಕಳು ತಳಿಯತಕ್ಕಿ ಬೊಳಕ್‍ನೊಂದಿಗೆ ಬಂದು ದೇವಾಲಯಕ್ಕೆ ಪ್ರದಕ್ಷಿಣೆಗೈದರು. ಈ ವೇಳೆ ದುಡಿಕೊಟ್ಟ ಪಾಟ್ ತಂಡವೂ ಪಾಲ್ಗೊಂಡಿತ್ತು. ಹುತ್ತರಿ ಹಬ್ಬದ ಅಂಗವಾಗಿ, ಪೊಂಗೇರ ವಸಂತ್ ಅವರು ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಾಡಿನ ಸುಭಿಕ್ಷೆಗಾಗಿ ಮತ್ತು ಮಹಾಮಾರಿ ಕೊರೊನಾ ನಿರ್ಮೂಲನೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ತಳಿಯತಕ್ಕಿ ಬೊಳಕ್, ಡೋಲು, ಜಾಗಟೆಗಳ ನಿನಾದದೊಂದಿಗೆ ದೇವಾಲಯದ ಮುಕ್ಕಾಟಿ ಸುಬ್ರಮಣಿ ಅವರು ಬೆಳ್ಳಿಯ ಬಿಂದಿಗೆ ಹೊತ್ತು, `ಪೊಲಿಪೊಲಿಯೇ ಬಾ’ ಎಂಬ ಉದ್ಗೋಷ ಮತ್ತು ಪಟಾಕಿಗಳ ಮೊರೆತದೊಂದಿಗೆ ಪೊಂಗೇರ ಅಪ್ಪಣ್ಣ ಅವರ `ಬಾಹುಬಲ್ಯ’ ಗದ್ದೆಗೆ ತೆರಳಲಾಯಿತು. ಗದ್ದೆಯಲ್ಲಿ ಕದಿರುಕೊಯ್ಯುವುದಕ್ಕೂ ಮುನ್ನ ಸುಬ್ರಮಣಿ ಅವರು ವಿಧಿವಿಧಾನಗಳನ್ನು ನೆರವೇರಿಸಿದರು. ಕದಿರುಕಟ್ಟಿ, ಹಾಲು ತುಪ್ಪ ಬಿಟ್ಟು ಪ್ರಾರ್ಥನೆ ಸಲ್ಲಿಸಿದರು.
ನಿಗದಿತ ಸಮಯವಾಗುತ್ತಿದ್ದಂತೆಯೇ ಶುಭ ಮುಹೂರ್ತದಲ್ಲಿ ಸುಬ್ರಮಣಿ ಅವರು ಕದಿರುಕೊಯ್ದು, ನೆರೆದವರ ಕೈಗೆ ನೀಡಿದರು. ಈ ವೇಳೆ ಶುಭ ಸೂಚಕವಾಗಿ ಗುಂಡು ಹಾರಿಸಲಾಯಿತು. ಪಟಾಕಿಗಳ ಶಬ್ದ ಮುಗಿಲು ಮುಟ್ಟಿತು. ‘ಪೊಲಿಪೊಲಿಯೇದೇವಾ’ ಎಂಬ ಉದ್ಘೋಷಗಳು ಮೊಳಗಿದವು.
ಅನಂತರ ಡೋಲು, ಜಾಗಟೆ, ಪೊಲಿಪೊಲಿಯೇದೇವಾ ಎಂಬ ಘೋಷದೊಂದಿಗೆ ಅಶ್ವತ್ಥಕಟ್ಟೆಗೆ ಪ್ರದಕ್ಷಿಣೆ ಹಾಕಿ, ದೇವಾಲಯಕ್ಕೆ ಮರಳಲಾಯ್ತು. ಸನ್ನಿಧಿಗೆ ಪ್ರದಕ್ಷಿಣೆ ಬಂದು, ಕದಿರನ್ನು ನಮಸ್ಕಾರ ಮಂಟಪದಲ್ಲಿಟ್ಟು ವಿಶೇಷ ಧಾನ್ಯಲಕ್ಷ್ಮಿ ಪೂಜೆ ನೆರವೇರಿಸಲಾಯಿತು. ಮುಖ್ಯ ಅರ್ಚಕ ಕುಶ ಭಟ್, ಗುರುಪ್ರಸಾದ್ ಮತ್ತು ತಂಡ, ಪೂಜೆಯನ್ನು ನಡೆಸಿಕೊಟ್ಟರು.
ಮೊದಲ ಕದಿರನ್ನು ಗರ್ಭಗುಡಿಯಲ್ಲಿ ಕಟ್ಟಿ, ಅನಂತರ ಇತರೆ ಗುಡಿಗಳಿಗೆ ಕಟ್ಟಲಾಯಿತು. ಅಲ್ಲದೆ, ನೆರೆದ ಭಕ್ತಾದಿಗಳಿಗೆ ಕದಿರು ವಿತರಿಸಲಾಯಿತು. ಆದರೆ, ಸಂಪ್ರದಾಯದಂತೆ ಪೊಂಗೆರ, ಕನಿಯಂಡ, ಕೋಲೆಯಂಡ, ಬೊಳ್ಳನಮಂಡ ಮತ್ತು ಐರಿರ ಕುಟುಂಬಗಳು ದೇವಾಲಯದಿಂದ ಕದಿರು ಕೊಂಡೊಯ್ಯುವುದಿಲ್ಲ. ಅವರೆಲ್ಲ ಮನೆಗೆ ಹಿಂತಿರುಗಿ, ತಮ್ಮದೇ ಗದ್ದೆಯಿಂದ ಕದಿರುಕೊಯ್ದು ಸಂಪ್ರದಾಯ ಪಾಲಿಸಿದರು.
ಸನ್ನಿಧಿಯಲ್ಲಿ ವಿಶೇಷ ಪೂಜೆಯ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವಾಯಿತು. ಈ ವೇಳೆ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಪೊಂಗೇರ ಚಂಗಪ್ಪ, ಕಣಿಯರ ನಾಣಯ್ಯ, ಜೀವನ್, ಕೋಲೆಯಂಡ ಅಶೋಕ್, ಬೊಳ್ಳಣಮ್ಮಂಡ ಪೊನ್ನಪ್ಪ, ಐರಿರ ಉತ್ತಪ್ಪ, ಪೊಂಗೆರ ಚಂಗಪ್ಪ ಮತ್ತಿತರರು ಹಾಜರಿದ್ದರು. ನಾಪೋಕ್ಲು ಕೊಡವ ಸಮಾಜ ಸೇರಿದಂತೆ ಸುತ್ತಮುತ್ತನ ನಾಗರಿಕರು ಕೂಡಾ ಹುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು. ಕುಶಾಲನಗರ: ಕುಶಾಲನಗರದ ಗೌಡ ಸಮಾಜದ ವತಿಯಿಂದ ಹುತ್ತರಿ ಹಬ್ಬ ಆಚರಣೆ ನಡೆಯಿತು.
ಸ್ಥಳೀಯ ಗೌಡ ಸಮಾಜದಲ್ಲಿ ಸಮಾಜ ಬಾಂಧವರು ಉಪಹಾರ ಸೇವನೆ ನಂತರ ಸಂಜೆ 7.45ಕ್ಕೆ ಗಂಟೆಗೆ ಸೇರಿ ನೆರೆಕಟ್ಟಿ ಹಾರಂಗಿ ರಸ್ತೆಯಲ್ಲಿರುವ ಕೊಡಗು ಗೌಡ ಯುವಕ ಸಂಘದ ಗದ್ದೆಗೆ ತೆರಳಿದ ನಂತರ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಕದಿರು ತೆಗೆಯಲಾಯಿತು. ಗುತ್ತಿಪೂಜೆಯನ್ನು ಸಮಾಜದ ಹಿರಿಯರಾದ ಕುಲ್ಲಚೆÀಟ್ಟಿ ಕಾಶಿ ಪೂವಯ್ಯ ನೆರವೇರಿಸಿದರು. ಸಮುದಾಯ ಬಾಂಧವರಿಗೆ ಹಾಗೂ ಸಾರ್ವಜನಿಕರಿಗೆ ಕದಿರು ವಿತರಿಸಲಾಯಿತು.
ಈ ಸಂದರ್ಭ ಗೌಡ ಸಮಾಜ ಅಧ್ಯಕ್ಷ ಕೂರನ ಪ್ರಕಾಶ್, ಕಾರ್ಯದರ್ಶಿ ಎಂ.ಕೆ. ಗಣೇಶ್, ಸುಳ್ಯಕೋಡಿ ಮಾದಪ್ಪ, ಪದ್ಮಾವತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪಟ್ಟಂದಿ ಬೀನಾ ಸೀತಾರಾಂ, ಕಾರ್ಯದರ್ಶಿ ಅಚ್ಚಾಂಡಿರ ಲತಾ, ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಹಾನಗಲ್ ರೂಪಾ ಗಣೇಶ್, ಕುಯ್ಯಮುಡಿ ವಾಣಿ ಸುರೇಶ್, ಚಿಲ್ಲನ ಲತಾ ಗಣೇಶ್, ಯುವಕ ಸಂಘದ ಅಧ್ಯಕ್ಷರಾದ ಕೊಡಗನ ಹರ್ಷ, ಕಾರ್ಯದರ್ಶಿ ಕುಲ್ಲಚ್ಚನ ಹೇಮಂತ್, ಖಜಾಂಚಿ ಕಡವಳಿರ ವಿವೇಕ್, ಚಿಲ್ಲನ ಗಣಿಪ್ರಸಾದ್, ಪೊನ್ನಚ್ಚನ ಮೋಹನ್, ಕರಂದ್ಲಾಜೆ ಆನಂದ್, ಮಾಜಿ ಸೈನಿಕರ ಗೌಡ ಕೂಟ ಮತ್ತು ಸಮಾಜದ ಪದಾಧಿಕಾರಿಗಳು, ಸದಸ್ಯರು ಇದ್ದರು.
ಕುಶಾಲನಗರ: ಕುಶಾಲನಗರ ಕೊಡವ ಸಮಾಜದ ವತಿಯಿಂದ ಪುತ್ತರಿ ನಮ್ಮೆ ಕೊಡವ ಸಮಾಜ ಆವರಣದಲ್ಲಿ ಸಾಂಪ್ರದಾಯಿಕವಾಗಿ ನಡೆಯಿತು. ಸಮಾಜದ ಆವರಣದಲ್ಲಿ 7.45 ಗಂಟೆಗೆ ನೆರೆಕಟ್ಟಿ ಪ್ರಾರ್ಥನೆ ನಂತರ ತಂಬಿಟ್ಟು, ಪಾಯಸ ವಿತರಿಸಲಾಯಿತು. 8.45 ಕ್ಕೆ ಸಮಾಜದ ಹಿರಿಯರಾದ ಬಲ್ಲಾರಂಡ ಜಾಲಿ ತಮ್ಮಯ್ಯ ಸಾಂಪ್ರದಾಯಿಕವಾಗಿ ಕದಿರು ತೆಗೆದು ನಂತರ ಸಮುದಾಯ ಬಾಂಧವರಿಗೆ, ಸಾರ್ವಜನಿಕರಿಗೆ ವಿತರಿಸಲಾಯಿತು.
ಈ ಸಂದರ್ಭ ಕೊಡವ ಸಮಾಜದ ಅಧ್ಯಕ್ಷ ಅಂಜಪರವಂಡ ರಘು ನಂಜಪ್ಪ, ಗೌರವ ಕಾರ್ಯದರ್ಶಿ ಪುಲಿಯಂಡ ಚಂಗಪ್ಪ, ಜಂಟಿ ಕಾರ್ಯದರ್ಶಿ ಗೌಡಂಡ ಗಣೇಶ್ ದೇವಯ್ಯ, ಮಾಜಿ ಅಧ್ಯಕ್ಷರಾದ ಮೇವಡ ಚಿಂಗಪ್ಪ, ನಿರ್ದೇಶಕರು, ಸಮುದಾಯ ಬಾಂಧವರು, ಸಾರ್ವಜನಿಕರು ಇದ್ದರು.ಮೃತ್ಯುಂಜಯ ದೇವಸ್ಥಾನದಲ್ಲಿ
ಮೃತ್ಯುಂಜಯ ದೇವಸ್ಥಾನದಲ್ಲಿ
ಜನರು ಪಾಲ್ಗೊಂಡು ವಿಜೃಂಭಣೆ ಯಿಂದ ಆಚರಣೆ ಮಾಡಿದರು.
ದೇವಸ್ಥಾನದಲ್ಲಿ ಸಾಂಪ್ರದಾಯಿಕ ವಾದ ವಿಶೇಷ ಪೂಜೆ ಹಾಗೂ ವಿಧಿವಿಧಾನ ನಡೆಸಿದ ನಂತರ ಪರಂಪರೆಯಿಂದ ದೇವಸ್ಥಾನಕ್ಕೆ ಪುತ್ತರಿ ದೇವ ಕದಿರು ತೆಗೆಯುವ ಮಲ್ಲೇಂಗಡ ಪೆಮ್ಮಯ್ಯ ಅವರ ಗದ್ದೆಗೆ ತಳಿಯತಕ್ಕಿ ಬೊಳಕ್, ಒಡ್ಡೋಲಗದೊಂದಿಗೆ ತೆರಳಿ ಕದಿರು ಕುಯ್ಯಲಾಯಿತು.
ಮೃತ್ಯುಂಜಯ ದೇವಸ್ಥಾನದಲ್ಲಿ ದೇವ ಕದಿರು ತೆಗೆದ ನಂತರ ಈ ಗ್ರಾಮದ ಇತರ ದೇವಸ್ಥಾನ ಮತ್ತು ಮನೆಗಳಲ್ಲಿ ಸೋಮವಾರ ರಾತ್ರಿ ಪುತ್ತರಿ ಹಬ್ಬದ ಕದಿರು ತೆಗೆಯಲಾಯಿತು. ದೇವಸ್ಥಾನದಲ್ಲಿ ದೇವ ಕದಿರು ತೆಗೆದ ನಂತರ ಸಾಮೂಹಿಕವಾಗಿ ಸಾಂಪ್ರದಾಯಿಕ ಪುತ್ತರಿ ವಿಶೇಷ ತಂಬಿಟ್ಟು ಹಾಗೂ ಊಟೋಪಚಾರ ನಡೆಯಿತು.
ಶ್ರೀ ಮೃತ್ಯುಂಜಯ ದೇವಸ್ಥಾನ ದ ದೇವತಕ್ಕ ಕುಟುಂಬವಾದ ಅಣ್ಣೀರ ಕುಟುಂಬದ ಅಣ್ಣೀರ ದಾದಗಣಪತಿ, ನಾಡ್‍ತಕ್ಕ ಕುಟುಂಬವಾದ ಕಾಯಪಂಡ ಕುಟುಂಬಸ್ಥರು, ದೇವಸ್ಥಾನಕ್ಕೆ ಪಾರಂಪಾರಿಕವಾಗಿ ಪುತ್ತರಿ ದೇವಕದಿರು ತೆಗೆಯುವ ಗದ್ದೆಯ ಕುಟುಂಬದ ಮಲ್ಲೇಂಗಡ ಪೆಮ್ಮಯ್ಯ, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಕಾಯಪಂಡ ಕಾವೇರಪ್ಪ, ಕಾರ್ಯದರ್ಶಿ ಅಣ್ಣೀರ ಪ್ರವೀಣ್‍ಚಂಗಪ್ಪ, ಉಪಾಧ್ಯಕ್ಷ ಅಮ್ಮತ್ತೀರ ಪರಮೇಶ್ವರ, ಮಾಜಿ ಅಧ್ಯಕ್ಷರುಗಳಾದ ಕುಪ್ಪುಡಿರ ಮುತ್ತಪ್ಪ, ಕಾಯಪಂಡ ಸ್ಟ್ಯಾಲಿನ್, ಚೋನಿರ ಸುಬ್ರಮಣಿ ಸೇರಿದಂತೆ ದೇವಸ್ಥಾನ ಸಮಿತಿ ಸದಸ್ಯರು, ನಾಡಿನ ನೂರಾರು ಜನರು ಪಾಲ್ಗೊಂಡಿದ್ದರು.ಪುತ್ತರಿ ವಿಶೇಷ ತಂಬಿಟ್ಟು ಹಾಗೂ ಊಟೋಪಚಾರ ನಡೆಯಿತು.
ಶ್ರೀ ಮೃತ್ಯುಂಜಯ ದೇವಸ್ಥಾನ ದ ದೇವತಕ್ಕ ಕುಟುಂಬವಾದ ಅಣ್ಣೀರ ಕುಟುಂಬದ ಅಣ್ಣೀರ ದಾದಗಣಪತಿ, ನಾಡ್‍ತಕ್ಕ ಕುಟುಂಬವಾದ ಕಾಯಪಂಡ ಕುಟುಂಬಸ್ಥರು, ದೇವಸ್ಥಾನಕ್ಕೆ ಪಾರಂಪಾರಿಕವಾಗಿ ಪುತ್ತರಿ ದೇವಕದಿರು ತೆಗೆಯುವ ಗದ್ದೆಯ ಕುಟುಂಬದ ಮಲ್ಲೇಂಗಡ ಪೆಮ್ಮಯ್ಯ, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಕಾಯಪಂಡ ಕಾವೇರಪ್ಪ, ಕಾರ್ಯದರ್ಶಿ ಅಣ್ಣೀರ ಪ್ರವೀಣ್‍ಚಂಗಪ್ಪ, ಉಪಾಧ್ಯಕ್ಷ ಅಮ್ಮತ್ತೀರ ಪರಮೇಶ್ವರ, ಮಾಜಿ ಅಧ್ಯಕ್ಷರುಗಳಾದ ಕುಪ್ಪುಡಿರ ಮುತ್ತಪ್ಪ, ಕಾಯಪಂಡ ಸ್ಟ್ಯಾಲಿನ್, ಚೋನಿರ ಸುಬ್ರಮಣಿ ಸೇರಿದಂತೆ ದೇವಸ್ಥಾನ ಸಮಿತಿ ಸದಸ್ಯರು, ನಾಡಿನ ನೂರಾರು ಜನರು ಪಾಲ್ಗೊಂಡಿದ್ದರು.ಬಸವೇಶ್ವರ ದೇವಸ್ಥಾನದಲ್ಲಿಪೆÇನ್ನಂಪೇಟೆ: ಇಲ್ಲಿನ ಬಸವೇಶ್ವರ ದೇವಸ್ಥಾನದ ಗದ್ದೆಯಲ್ಲಿ ರಾತ್ರಿ ಕದಿರು ತೆಗೆಯುವ ಮೂಲಕ ಹುತ್ತರಿ ಆಚರಿಸಲಾಯಿತು. ಗದ್ದೆಯಿಂದ ಕದಿರು ತೆಗೆದುಕೊಂಡು ಬಂದು ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿ ನಂತರ ಸಾರ್ವಜನಿಕರು ಮನೆಗೆ ಕದಿರು ತೆಗೆದುಕೊಂಡು ಹೋಗುವ ಮೂಲಕ ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಂಡರು. ಪೆÇನ್ನಂಪೇಟೆ ವ್ಯಾಪ್ತಿಯ ನೂರಾರು ನಾಗರಿಕರು ಪಾಲ್ಗೊಂಡಿದ್ದರು. ನಡಿಕೇರಿ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೆಳಿಗ್ಗೆ ಕದಿರು ತೆಗೆಯುವ ಮೂಲಕ ನಡಿಕೇರಿ ಗ್ರಾಮಸ್ಥರು ಹುತ್ತರಿ ಆಚರಿಸಿದರು.ಸಾಂಕೇತಿಕ ಕೋಲಾಟ
ವರ್ಷಂಪ್ರತಿ ಹುತ್ತರಿ ಮರುದಿನ ಮಡಿಕೇರಿ ಕೋಟೆ ಆವರಣರದಲ್ಲಿ ಜರುಗುತ್ತಿದ್ದ ಹುತ್ತರಿ ಕೋಲಾಟ ಹಾಗೂ ಬೊಳಕಾಟವನ್ನು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ನೆರವೇರಿಸಲಾಯಿತು. ಶ್ರೀ ಕೋಟೆ ಗಣಪತಿಗೆ ಪ್ರಾರ್ಥಿಸಿದ ನಂತರ ಫಲಾಹಾರ ಸೇವಿಸಿ ಕೋಟೆ ಆವರಣದಲ್ಲಿ ದೀಪ ಬೆಳಗಿ ಒಂದು ಸುತ್ತು ಕೋಲಾಟ ಹಾಗೂ ಒಂದು ಸುತ್ತು ಬೊಳಕಾಟ ಆಡಿ ಪದ್ಧತಿಯನ್ನು ಆಚರಿಸಲಾಯಿತು. ಪಾಂಡೀರ ಕುಟುಂಬಸ್ಥರು ದೇವಾಲಯ ಸಮಿತಿಯವರು ಇದ್ದರು.ಮಡಿಕೇರಿ ಕೊಡವ ಸಮಾಜದಲ್ಲಿ
ಮಡಿಕೇರಿ ಕೊಡವ ಸಮಾಜ ವತಿಯಿಂದ ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ಸಹಕಾರದೊಂದಿಗೆ ಹುತ್ತರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಕೊಡವ ಸಮಾಜದ ನೆಲ್ಲಕ್ಕಿ ಬಾಡೆಯಲ್ಲಿ ಅಧ್ಯಕ್ಷ ಕೆ.ಎಸ್. ದೇವಯ್ಯ ನೇತೃತ್ವದಲ್ಲಿ ಅಕ್ಕಿ ಹಾಕಿ ಪ್ರಾರ್ಥನೆ ಸಲ್ಲಿಸಿ ನೆರೆ ಕಟ್ಟಿದ ಬಳಿಕ ಓಡಿಯಂಡ ಮಾದಪ್ಪ ಮುಂದಾಳತ್ವದಲ್ಲಿ ದುಡಿಕೊಟ್ಟು ಹಾಡಿನೊಂದಿಗೆ ಓಂಕಾರೇಶ್ವರ ದೇವಾಲಯಕ್ಕೆ ತೆರಳಿ ಕದಿರು ತೆಗೆಯಲಾಯಿತು. ನಂತರ ಶ್ರೀ ಕೋಟೆ ಮಹಾಗಣಪತಿ ದೇವಾಲಯಕ್ಕೆ ತೆರಳಿ ಕದಿರು ಕಟ್ಟಿದ ಬಳಿಕ ಸಮಾಜಕ್ಕೆ ಹಿಂತಿರುಗಿ ಸಾರ್ವಜನಿಕವಾಗಿ ತಂಬಿಟ್ಟು ಪ್ರಸಾದದೊಂದಿಗೆ ಕದಿರು ವಿತರಿಸಲಾಯಿತು. ಈ ಸಂದರ್ಭ ಸಮಾಜದ ಪದಾಧಿಕಾರಿಗಳು, ಸದಸ್ಯರು, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ಸದಸ್ಯರುಗಳಾದ ಉದಕುಮಾರ್, ಪ್ರಕಾಶ್ ಆಚಾರ್ಯ, ದಮಯಂತಿ, ಕೊಡವ ಸಮಾಜ ಉಪಾಧ್ಯಕ್ಷ ಚೋವಂಡ ಕಾಳಪ್ಪ, ಗೌರವ ಕಾರ್ಯದರ್ಶಿ ಅರೆಯಡ ರಮೇಶ್, ನಿರ್ದೇಶಕರು, ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.ಸೋಮವಾರಪೇಟೆ ವ್ಯಾಪ್ತಿಯಲ್ಲಿ ಹುತ್ತರಿ ಆಚರಣೆ
ಸೋಮವಾರಪೇಟೆ: ಧಾನ್ಯ ಲಕ್ಷ್ಮಿಯನ್ನು ಪೂಜಿಸಿ ಮನೆ ತುಂಬಿಸಿಕೊಳ್ಳುವ ಸಾಂಪ್ರದಾಯಿಕ ಆಚರಣೆಯಾದ ಹುತ್ತರಿ ಹಬ್ಬವನ್ನು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಇಲ್ಲಿನ ಕೊಡವ ಸಮಾಜದ ವತಿಯಿಂದ ಆಂಜನೇಯ ದೇವಾ ಲಯದ ಬಳಿಯಿರುವ ಸಮಾಜದ ಗದ್ದೆಯಲ್ಲಿ ಭತ್ತದ ಪಸಲಿಗೆ ಸಾಮೂಹಿಕವಾಗಿ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಕದಿರು ವಿತರಿಸಲಾಯಿತು. ನಂತರ ಕದಿರನ್ನು ಸಮಾಜಕ್ಕೆ ತಂದು ಪೂಜೆ ಸಲ್ಲಿಸಿ, ಸಮಾಜದ ಸದಸ್ಯರಿಗೆ ವಿತರಿಸ ಲಾಯಿತು. ಧಾನ್ಯ ಲಕ್ಷ್ಮೀ ನಾಡಿಗೆ ಸುಭೀಕ್ಷೆ ತರಲಿ ಎಂದು ಪ್ರಾರ್ಥಿಸಲಾಯಿತು. ಈ ಸಂದರ್ಭ ಕೊಡವ ಸಮಾಜದ ಅಧ್ಯಕ್ಷ ಅಭಿಮನ್ಯುಕುಮಾರ್, ಪದಾಧಿಕಾರಿ ಗಳಾದ ಶರತ್, ಮಣಿ ಉತ್ತಪ್ಪ, ಮುತ್ತಣ್ಣ, ಪೂಣಚ್ಚ, ರಾಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಿರಗಂದೂರಿನಲ್ಲಿ: ಸಮೀಪದ ಕಿರಗಂದೂರು ಗ್ರಾಮದಲ್ಲಿ ಗ್ರಾಮಸ್ಥರು ಸಾಮೂಹಿಕವಾಗಿ ಹುತ್ತರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಗ್ರಾಮದ ಹೆಚ್.ಎನ್. ನಾಗರಾಜು ಅವರ ಗದ್ದೆಯಲ್ಲಿ ಕದಿರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಕದಿರು ತೆಗೆದು ಗ್ರಾಮಸ್ಥರಿಗೆ ಹಂಚಲಾಯಿತು. ಹಬ್ಬದ ಅಂಗವಾಗಿ ಗ್ರಾಮದಲ್ಲಿ ಸಾಮೂಹಿಕ ಭೋಜನ ನಡೆಯಿತು.
ಈ ಸಂದರ್ಭ ಗ್ರಾಮಾಧ್ಯಕ್ಷ ದಯಾನಂದ್, ಮುಖಂಡರಾದ ಶಿವಪ್ರಸಾದ್, ಕುಶಾಲಪ್ಪ, ಬವರಾಜು, ಗೌತಮ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಇದರೊಂದಿಗೆ ಸೋಮವಾರಪೇಟೆ ವ್ಯಾಪ್ತಿಯ ನೇರುಗಳಲೆ, ಗೌಡಳ್ಳಿ, ಅರೆಯೂರು, ಅಬ್ಬೂರುಕಟ್ಟೆ, ಐ�