ಮಡಿಕೇರಿ, ನ. 28: ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಕೃಷಿಗೆ ಪೂರಕವಾಗಿರುವ ಹಬ್ಬವಾಗಿರುವ ಹುತ್ತರಿಯ ಸಂಭ್ರಮಕ್ಕೆ ಕ್ಷಣಗಣಗೆ ಆರಂಭವಾಗಿದೆ. ಕೊಡಗಿನ ಸುಗ್ಗಿ ಹಬ್ಬವೆಂದೇ ಬಿಂಬಿತವಾಗಿರುವ ಧಾನ್ಯಲಕ್ಷ್ಮಿಯನ್ನು ಭಕ್ತಿಪೂರ್ವಕವಾಗಿ ಮಡಿಕೇರಿ, ನ. 28: ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಕೃಷಿಗೆ ಪೂರಕವಾಗಿರುವ ಹಬ್ಬವಾಗಿರುವ ಹುತ್ತರಿಯ ಸಂಭ್ರಮಕ್ಕೆ ಕ್ಷಣಗಣಗೆ ಆರಂಭವಾಗಿದೆ. ಕೊಡಗಿನ ಸುಗ್ಗಿ ಹಬ್ಬವೆಂದೇ ಬಿಂಬಿತವಾಗಿರುವ ಧಾನ್ಯಲಕ್ಷ್ಮಿಯನ್ನು ಭಕ್ತಿಪೂರ್ವಕವಾಗಿ ಮಡಿಕೇರಿ, ನ. 28: ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಕೃಷಿಗೆ ಪೂರಕವಾಗಿರುವ ಹಬ್ಬವಾಗಿರುವ ಹುತ್ತರಿಯ ಸಂಭ್ರಮಕ್ಕೆ ಕ್ಷಣಗಣಗೆ ಆರಂಭವಾಗಿದೆ. ಕೊಡಗಿನ ಸುಗ್ಗಿ ಹಬ್ಬವೆಂದೇ ಬಿಂಬಿತವಾಗಿರುವ ಧಾನ್ಯಲಕ್ಷ್ಮಿಯನ್ನು ಭಕ್ತಿಪೂರ್ವಕವಾಗಿ ಬಳಿಕ ಹಲವು ದಿನಗಳ ಕಾಲ ಅಲ್ಲಲ್ಲಿನ ಪದ್ಧತಿಯಂತೆ ನಡೆಯುವ ಕೋಲ್‍ಮಂದ್‍ಗೂ ಸಿದ್ಧತೆ ನಡೆಯುತ್ತಿವೆ. ಈಗಾಗಲೇ ಜಿಲ್ಲೆಯಲ್ಲಿನ ಹಲವಾರು ಮಂದ್ - ಮಾನಿಗಳಲ್ಲಿ ಸ್ವಚ್ಛತಾ ಕಾರ್ಯಗಳು ನಡೆದಿವೆ. ಜಿಲ್ಲೆಯ ಎಲ್ಲಾ ಜಾತಿ ಜನಾಂಗ ಬಾಂಧವರು ಹಬ್ಬದ ಸಂಭ್ರಮಾಚರಣೆ ಮಾಡಲಿದ್ದು, ಈ ಬಾರಿ ನ. 30 ರಂದು ರಾತ್ರಿ ಹುತ್ತರಿ ಹಬ್ಬದ ಕದಿರು ತೆಗೆಯುವ

(ಮೊದಲ ಪುಟದಿಂದ) ಕಾರ್ಯಕ್ಕೆ ಪದ್ಧತಿಯಂತೆ ಶ್ರೀ ಇಗ್ಗುತಪ್ಪ ದೇಗುಲದಲ್ಲಿ ಮುಹೂರ್ತ ನಿಗದಿಪಡಿಸಲಾಗಿದೆ.

ಹಬ್ಬದ ಮರುದಿನ ಮಡಿಕೇರಿ ಕೋಟೆ ಆವರಣದಲ್ಲಿ ಸಾಮೂಹಿಕ ಪಾಲ್ಗೊಳ್ಳುವಿಕೆಯೊಂದಿಗೆ ಐತಿಹಾಸಿಕ ಹಿನ್ನೆಲೆಯೊಂದಿಗೆ ಕೋಲ್‍ಮಂದ್ ಜರುಗಲಿದ್ದು, ಇದರೊಂದಿಗೆ ನಂತರದ ದಿನಗಳಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಆಯಾ ವಿಭಾಗದಲ್ಲಿ ಈ ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ನಿಗದಿತ ದಿನಗಳಲ್ಲಿ ಕೋಲ್‍ಮಂದ್, ನಾಡ್‍ಮಂದ್, ಪುತ್ತರಿ ಊರೊರ್ಮೆ, ಮನೆಪಾಟ್ ನಂತಹ ಕಾರ್ಯಕ್ರಮಗಳು ಆಚರಿಸಲ್ಪಡಲಿವೆ. ಸಾರ್ವಜನಿಕ ಸಭೆ - ಸಮಾರಂಭಗಳೂ ಇದರೊಂದಿಗೆ ಮಿಳಿತವಾಗಿರುವದರಿಂದ ಇವೆಲ್ಲಾ ಆಚರಣೆಗಳಿಗಾಗಿ ಅಲ್ಲಲ್ಲಿ ವ್ಯಾಪಕ ಸಿದ್ಧತೆಗಳು ನಡೆದಿವೆ.

ಮಂದ್ - ಮಾನಿಗಳು

ಜಿಲ್ಲೆಯಲ್ಲಿ ಪ್ರಮುಖವಾಗಿ ಮಡಿಕೇರಿ ಕೋಟೆ ಆವರಣ, ಪಾಂಡಾಣೆ ಮಂದ್, ಬಿದ್ದಾಟಂಡವಾಡೆ, ಕುರುಳಿ ಅಂಬಲ, ತಾಳೇರಿ ಮೂಂದ್‍ನಾಡ್ ಮಂದ್, ಕೈಮುಡಿಕೆ ಮಂದ್, ಆರಾಯಿರನಾಡ್ ಪೂಮಾಲೆ ಮಂದ್, ಕೆಂಜಿರಾಣೆ, ಬೈರನಾಡ್, ಸೂರ್ಲಬ್ಬಿ, ಉಮ್ಮೆಟಿ ಮಂದ್, ಮರೆನಾಡ್, ಚೋರಂಗೆಮಾನಿ ಮಂದ್ ಸೇರಿದಂತೆ ಹಲವೆಡೆಗಳಲ್ಲಿ ವಿವಿಧ ಗ್ರಾಮಗಳನ್ನು ಒಳಗೊಂಡಂತೆ ಇರುವ ಮಂದ್‍ಗಳಲ್ಲಿ ಪುತ್ತರಿ ಹಬ್ಬದ ಜನಪದೀಯ ಸಂಸ್ಕøತಿಗಳು ಆಯೋಜನೆಗೊಳ್ಳಲಿವೆ.

100ಕ್ಕೂ ಅಧಿಕ ಮಂದ್‍ಗಳು

ಈ ಹಿಂದಿನ ಕಾಲದಿಂದ ನಡೆದುಕೊಂಡು ಬಂದಿರುವ ಪರಂಪರೆಯ ಪ್ರಕಾರ ಕೊಡಗಿನ ವಿವಿಧೆಡೆಗಳಲ್ಲಿ ಸುಮಾರು 100ಕ್ಕೂ ಅಧಿಕ ಮಂದ್‍ಗಳಿವೆ. ಇತ್ತೀಚಿನ ವರ್ಷಗಳಲ್ಲಿ ಕಾರಣಾಂತರಗಳಿಂದ ಕೆಲವಾರು ಮಂದ್‍ಗಳು ಕಾರ್ಯನಿರ್ವಹಣೆಯಿಲ್ಲದೆ ಮುಚ್ಚಿ ಹೋಗಿ, ಕಾಡುಪಾಲಾಗಿದ್ದವು. ಇದೀಗ ಮುಚ್ಚಿ ಹೋಗಿದ್ದ ಹಲವಷ್ಟು ಮಂದ್‍ಗಳು ಮರುಕಾಯಕಲ್ಪ ಕಾಣುತ್ತಿವೆ. ಯುಕೋ ಸಂಘಟನೆ ಕಳೆದ 7 ವರ್ಷದಿಂದ ಮಂದ್‍ನಮ್ಮೆ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿರುವುದು ಸೇರಿದಂತೆ, ಪುರಾತನ ಸಂಸ್ಕøತಿಯ ಪಾಲನೆಯಾಗಬೇಕೆಂಬ ಹಲವರ ಒತ್ತಾಸೆಯಂತೆ ಮುಚ್ಚಲ್ಪಟ್ಟಿದ್ದ ಮಂದ್‍ಗಳು ಮತ್ತೆ ಬೆಳಕಿಗೆ ಬರುತ್ತಿವೆ. ಪ್ರಸ್ತುತ ಸುಮಾರು 70 ಮಂದ್‍ಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ ಎನ್ನಲಾಗಿದ್ದು, ಈ ಬಾರಿಯೂ ಒಂದೆರಡು ಮಂದ್‍ಗಳು ಹೊಸದಾಗಿ ಮರು ಕಾಯಕಲ್ಪ ಕಾಣುತ್ತಿವೆ. ಮಂದ್‍ಮಾನಿಗಳ ಜತೆಗೆ ವಿವಿಧ ಸಮಾಜ ಸಂಘ - ಸಂಸ್ಥೆಗಳ ಮೂಲಕವೂ ವಿವಿಧ ಕಾರ್ಯಕ್ರಮಗಳು ಹಬ್ಬದ ಪೂರಕವಾಗಿ ಜರುಗಲಿದೆ.

- ಶಶಿ ಸೋಮಯ್ಯ