ಕುಶಾಲನಗರ, ನ. 28: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಇಲಾಖೆ ಆಶ್ರಯದಲ್ಲಿ ಕುಶಾಲನಗರದಲ್ಲಿ ಪುರುಷ ಸಂತಾನ ನಿರೋಧ ಶಕ್ತಿ ಚಿಕಿತ್ಸಾ ಪಾಕ್ಷಿಕ ಅರಿವು ಕಾರ್ಯಕ್ರಮ ನಡೆಯಿತು.ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುರುಷ ಸಂತಾನ ಶಕ್ತಿ ನಿರೋಧ ಶಸ್ತ್ರಚಿಕಿತ್ಸೆ ಮಾಡಿಕೊಂಡ ಫಲಾನುಭವಿಗಳಿಗೆ ರೂ. 1100 ಪರಿಹಾರ ಧನ ಸರಕಾರದಿಂದ ನೀಡಲಾಗುತ್ತದೆ. ಡಿ. 30 ರಂದು ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದರು. ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ. ಆನಂದ್, ಸ್ಥಳೀಯ ವೈದ್ಯರಾದ ಡಾ. ಭರತ್, ಡಾ. ವೀಣಾ ಮತ್ತಿತರರು ಇದ್ದರು.