ಸೋಮವಾರಪೇಟೆ, ನ. 28: ತಾಲೂಕು ಪಂಚಾಯಿತಿ ಅನುದಾನದಲ್ಲಿ ಕೆಂಚಮ್ಮನ ಬಾಣೆಯಲ್ಲಿ 5.07 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ತಾ.ಪಂ. ಸದಸ್ಯ ಬಿ.ಬಿ.ಸತೀಶ್ ಭೂಮಿಪೂಜೆ ನೆರವೇರಿಸಿದರು.

ಸಮುದಾಯಭವನದ ತಡೆಗೋಡೆ ನಿರ್ಮಾಣಕ್ಕೆ 1.68 ಲಕ್ಷ ರೂ. ಚಿನ್ನಪ್ಪನವರ ಮನೆಯ ಸಮೀಪದ ಚರಂಡಿ ನಿರ್ಮಾಣಕ್ಕೆ 2ಲಕ್ಷ, ಅಂಗನವಾಡಿ ಕಾಂಪೌಂಡ್ ನಿರ್ಮಾಣಕ್ಕೆ 1.15 ಲಕ್ಷ, ಲಕ್ಷ್ಮೀ ಅವರ ಮನೆಯ ಹತ್ತಿರ ಚರಂಡಿ ನಿರ್ಮಾಣಕ್ಕೆ 1.33 ಲಕ್ಷ ರೂ.ಗಳನ್ನು ವಿನಿಯೋಗಿಸಲಾಗಿದೆ ಎಂದು ಸತೀಶ್ ಹೇಳಿದರು.

ಈ ಸಂದರ್ಭ ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಎ.ಯಾಕೂಬ್, ಬಸವರಾಜ್, ಸೋಮಶೇಖರ್, ಮೀನಾ. ಸುನಿಲ್, ಆನಂದ್ ಉದಯ, ಶಂಕರ್ ಇದ್ದರು.