ಸೋಮವಾರಪೇಟೆ, ನ.28 ಸಮೀಪದ ನಗರಳ್ಳಿಯಲ್ಲಿ ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸುಗ್ಗಿಯ ಎಮ್ಮೆ ಸುಗ್ಗಿ ಉತ್ಸವಕ್ಕೆ ತಾ.29ರಂದು (ಇಂದು) ಎಮ್ಮೆಗೆ ಹೊನ್ನು ಕಟ್ಟುವ ಕಾರ್ಯಕ್ರಮದೊಂದಿಗೆ ಚಾಲನೆ ದೊರೆಯಲಿದೆ.

ಆಗಸ್ಟ್ 8ರಂದು 12 ವರ್ಷದ ಮೀಸಲು ಬಿತ್ತುವ ಪೂಜಾಕ್ರಮದಿಂದ ಸುಗ್ಗಿಯು ಆರಂಭವಾಗಿದ್ದು, 12 ವರ್ಷಕೊಮ್ಮೆ ನಡೆಯುವ ಉತ್ಸವಕ್ಕೆ ಬೆಳಿಗ್ಗೆ 9 ಗಂಟೆಗೆ ಸಾಂಪ್ರದಾಯಿಕ ಪೂಜೆ ನಡೆಯಲಿದೆ. ಡಿಸೆಂಬರ್ 27ರ ವರೆಗೆ ಹಲವು ಸಾಂಪ್ರದಾಯಿಕ ಪೂಜೆ ನಡೆಯಲಿವೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಕೆ.ಟಿ.ಜೋಯಪ್ಪ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ:-8277146225, 9481773102ಗೆ ಸಂಪರ್ಕಿಸಬಹುದಾಗಿದೆ.