ಮಡಿಕೇರಿ, ನ. 28: ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಮರಣ ಹೊಂದಿದ ರಾಜು ಅವರ ವಾರಸುದಾರರು ಇಲ್ಲದೆ ಇದ್ದು ಅವರ ಮೃತದೇಹವನ್ನು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಇಂದು ಮಡಿಕೇರಿ ನಗರ ಠಾಣೆ ಪೊಲೀಸರ ಸೂಚನೆ ಮೇರೆಗೆ ಅವರ ಅಂತ್ಯಕ್ರಿಯೆಯನ್ನು ಮಡಿಕೇರಿ ನಗರದ ಸಾಮಾಜಿಕ ಕಾರ್ಯಕರ್ತರುಗಳು ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಿದರು.

ಈ ಕಾರ್ಯದಲ್ಲಿ ಮಹಮ್ಮದ್ ಅನೀಫ್ ಪ್ರಭು ರೈ. ಸತೀಶ್ ಪೈ, ಪ್ರಕಾಶ್ ಆಚಾರ್ಯ, ಕನ್ನಿಕೆ, ರವಿ ಗೌಡ, ಹೊಟೇಲ್ ಉದ್ಯಮಿ ಡ್ಯೂಕ್, ಜಗದೀಶ್ ಹಾಗೂ ನಗರ ಠಾಣಾ ಪೆÇಲೀಸ್ ಸಿಬ್ಬಂದಿಗಳಾದ ಹೊನ್ನಪ್ಪ. ಅರುಣ್ ನಗರಸಭಾ ಸಿಬ್ಬಂದಿಗಳು ಹಾಜರಿದ್ದರು.