ಶ್ರೀಮಂಗಲ, ನ. 28: ದಕ್ಷಿಣ ಕೊಡಗಿನ ತಾವಳಗೇರಿಯ ಶ್ರೀ ಮಹದೇವರ ದೇವಸ್ಥಾನದ ವಾರ್ಷಿಕ ಉತ್ಸವದ ಪ್ರಯುಕ್ತ ತಾ 29. ರಂದು (ಇಂದು) ರಾತ್ರಿ ಕೊಡಿಮರ ನಿಲ್ಲಿಸುವುದು, ತಾ. 30 ರಂದು ರಾತ್ರಿ 7 ಗಂಟೆಗೆ ಕದಿರುವುದು ತೆಗೆಯುವುದು ಹಾಗೂ ಡಿ. 1 ರಂದು ರಾತ್ರಿ 7.30 ಗಂಟೆಗೆ ದೇವರ ಅವಭೃತ ಸ್ನಾನ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.