ಪಾಲಿಬೆಟ್ಟ, ನ. 26: ಕಾರ್ಮಿಕ ವ್ಯಕ್ತಿಯೊಬ್ಬನ ಮೇಲೆ ಹಾಡಹಗಲೇ ಕಾಡಾನೆಯೊಂದು ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ಚೆನ್ನಂಗಿಯಲ್ಲಿ ನಡೆದಿದೆ.

ಚೆನ್ನಂಗಿ ಬಸವನಹಳ್ಳಿ ಹಾಡಿಯ ನಿವಾಸಿ ತಮ್ಮಣ್ಣ (60) ಎಂಬವರು ಕಾಡಾನೆ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡು ಪಾಲಿಬೆಟ್ಟ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹೇಶ್ ಎಂವರಿಗೆ ಸೇರಿದ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ತಮ್ಮಣ್ಣ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅರಣ್ಯದಂಚಿ ನಿಂದ ಬಂದ ಕಾಡಾನೆಯೊಂದು ಹಠಾತ್ ದಾಳಿ ಮಾಡಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ.

ಅದೇ ಮಾರ್ಗವಾಗಿ ಬರುತ್ತಿದ್ದ ಇತರ ಕಾರ್ಮಿಕರು ಕಾಡಾನೆ ದಾಳಿಯನ್ನು ಕಂಡು ಬೊಬ್ಬೆ ಹಾಕಿದ ಸಂದರ್ಭ ಆನೆ ಅಲ್ಲಿಂದ ಕಾಡಿಗೆ ಓಡಿದೆ.

ಆನೆ ದಾಳಿಯಿಂದ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ತಮ್ಮಣ್ಣನನ್ನು ಕಾರ್ಮಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ತಿಮ್ಮಣ್ಣ, ಪಾಲಿಬೆಟ್ಟ ಪೆÇಲೀಸ್ ಉಪಠಾಣೆಯ ದೇವಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.