ವೀರಾಜಪೇಟೆ, ನ. 26: ವೀರಾಜಪೇಟೆಯ ಬಿಸ್ಮಿಲ್ಲಾ ಶಾವಲಿ ಕಮಿಟಿಯ ಕಟ್ಟಡ ನಿರ್ಮಾಣದ ವಿರುದ್ಧ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ವಜಾಗೊಳಿಸಿ ಇಲ್ಲಿನ ಸಮುಚ್ಚಯ ನ್ಯಾಯಾಲಯದಲ್ಲಿರುವ ಪ್ರಿನ್ಸಿಪÀಲ್ ಮುನ್ಸಿಫ್ ನ್ಯಾಯಾಲಯ ಶಾವಲಿ ಕಮಿಟಿ ಪರವಾಗಿ ತೀರ್ಪು ನೀಡಿದೆ.

ವೀರಾಜಪೇಟೆಯ ಎಂ.ಕೆ. ತಾಹೀರ್ ಎಂಬವರು ಇಲ್ಲಿನ ಮಲಬಾರ್ ರಸ್ತೆಯಲ್ಲಿರುವ ಮಕಾನ್ ಜಾಗದ ಸರ್ವೆ ನಂ. 53ರ 3.92 ಎಕರೆ ಜಾಗದಲ್ಲಿ ಯಾವುದೇ ಹೊಸ ಕಟ್ಟಡ ಕಟ್ಟದಂತೆ ಈಗಿನ ಕಟ್ಟಡದ ಕಾಮಗಾರಿಯನ್ನು ಮುಂದುವರೆಸ ದಂತೆ ಬಿಸ್ಮಿಲ್ಲಾ ಶಾವಲಿ ಮಕಾನ್ ಕಮಿಟಿ ವಿರುದ್ಧ ತಡೆಯಾಜ್ಞೆ ತಂದು ಕಾಮಗಾರಿಗೆ ತಡೆವೊಡ್ಡಿದ್ದರು.

ಈ ತಡೆಯಾಜ್ಞೆ ಸಂಬಂಧದಲ್ಲಿ ಬಿಸ್ಮಿಲ್ಲಾ ಶಾವಲಿ ಕಮಿಟಿ ನ್ಯಾಯಾಲ ಯದಲ್ಲಿ ಆಕ್ಷೇಪಣೆ ಅರ್ಜಿ ಸಲ್ಲಿಸಿದ ಕಟ್ಟಡ ಕಟ್ಟದಂತೆ ಈಗಿನ ಕಟ್ಟಡದ ಕಾಮಗಾರಿಯನ್ನು ಮುಂದುವರೆಸ ದಂತೆ ಬಿಸ್ಮಿಲ್ಲಾ ಶಾವಲಿ ಮಕಾನ್ ಕಮಿಟಿ ವಿರುದ್ಧ ತಡೆಯಾಜ್ಞೆ ತಂದು ಕಾಮಗಾರಿಗೆ ತಡೆವೊಡ್ಡಿದ್ದರು.

ಈ ತಡೆಯಾಜ್ಞೆ ಸಂಬಂಧದಲ್ಲಿ ಬಿಸ್ಮಿಲ್ಲಾ ಶಾವಲಿ ಕಮಿಟಿ ನ್ಯಾಯಾಲ ಯದಲ್ಲಿ ಆಕ್ಷೇಪಣೆ ಅರ್ಜಿ ಸಲ್ಲಿಸಿದ ನಂತರ ಎರಡು ಕಡೆಯವರನ್ನು ನ್ಯಾಯಾಲಯ ವಿಚಾರಣೆ ನಡೆಸಿದ್ದು ಶಾವಲಿ ಕಮಿಟಿಯವರು ಕಟ್ಟಡ ಕಾಮಗಾರಿಯನ್ನು ಮುಂದುವರೆಸಲು ತೀರ್ಪಿನ ಆದೇಶದಲ್ಲಿ ತಿಳಿಸಿದೆ.

ಬಿಸ್ಮಿಲ್ಲಾ ಶಾವಲಿ ಮಕಾನ್ ಕಮಿಟಿಯ ಪರವಾಗಿ ವಕೀಲ ಡಿ.ಸಿ. ದ್ರುವ ವಾದಿಸಿದರು.