ನಾಪೆÇೀಕ್ಲು, ನ. 27: ನಾಪೆÇೀಕ್ಲು ಮಾರುಕಟ್ಟೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೆÇಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಿಗ್ಗೆ 10.30 ಗಂಟೆ ಸುಮಾರಿಗೆ ನಾಪೆÇೀಕ್ಲು ಠಾಣಾಧಿಕಾರಿ ಆರ್. ಕಿರಣ್ ಹಾಗೂ ಸಿಬ್ಬಂದಿಗಳು ಗಸ್ತು ತಿರುಗುತ್ತಿರುವ ಸಂದರ್ಭ ಖಚಿತ ಮಾಹಿತಿ ಮೇರೆಗೆ ಸುಂಟಿಕೊಪ್ಪ ಗದ್ದೆಹಳ್ಳದ ನಿವಾಸಿ ಮಹಮ್ಮದ್ ತಾಹಿರ್ (59) ನನ್ನು ವಶಕ್ಕೆ ಪಡೆದುಕೊಂಡಿದ್ದು, ಚಿಕ್ಕ ಚಿಕ್ಕ ಪ್ಯಾಕೆಟ್‍ಗಳಲ್ಲಿ ಮಾರಾಟ ಮಾಡಲು ಜೇಬಿನಲ್ಲಿಟ್ಟುಕೊಂಡಿದ್ದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಲಂ: 20 (ಃ)II ಓಆPS ಂಛಿಣ 1985ನಂತೆ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.