ಮಡಿಕೇರಿ, ನ. 26: ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರದ ಸಂಪಿಗೆಕಟ್ಟೆ ರಸ್ತೆಯಿಂದ ಕನ್ನಂಡಬಾಣೆ ರಸ್ತೆಯ ಮೂಲಕ ಹಾದು ಹೋಗುವ ರಸ್ತೆಯು ಗುಂಡಿಗಳಿಂದ ಕೂಡಿದ್ದು, ಪಾದಚಾರಿಗಳು ಹಾಗೂ ವಾಹನ ಸಂಚರಿಸಲು ತೊಂದರೆ ಆಗುತ್ತಿರುವುದರ ಬಗ್ಗೆ ಮಡಿಕೇರಿ ನಗರಸಭಾ ಆಯುಕ್ತ ರಾಮದಾಸ್ ಅವರ ಗಮನಕ್ಕೆ ತರಲಾಯಿತು. ಈ ರಸ್ತೆಯನ್ನು ಆದಷ್ಟು ಬೇಗ ಮರು ಡಾಂಬರೀಕರಣ ಮಾಡಿ ಕೊಡುವಂತೆ ಮನವಿ ಮಾಡಲಾಯಿತು ಮಡಿಕೇರಿ ನಗರದ ಗೌಳಿ ಬೀದಿಯಲ್ಲಿ ದಾನಿಗಳು ನಗರಸಭೆಗೆ ನೀಡಿದಂತಹ ಆಟದ ಮೈದಾನವನ್ನು ಶುಚಿಗೊಳಿಸಿ ಹಾಗೂ ಅಲ್ಲಿ ಅಕ್ಕಪಕ್ಕದ ಕಟ್ಟಡ ಕಾಮಗಾರಿ ನಡೆಯುತ್ತಿರುವ ಕಟ್ಟಡಗಳ ಸಾಮಗ್ರಿಗಳನ್ನು ಮೈದಾನದಲ್ಲಿ ಹಾಕಿರುವುದರ ಬಗ್ಗೆ ಆಯುಕ್ತರ ಗಮನಕ್ಕೆ ತರಲಾಯಿತು ಈ ಸಾಮಗ್ರಿಗಳನ್ನು ತೆರವುಗೊಳಿಸಿ ಮಕ್ಕಳಿಗೆ ಆಟವಾಡಲು ಮೈದಾನವನ್ನು ಒದಗಿಸಿ ಕೊಡಬೇಕೆಂದು ಕೋರಲಾಯಿತು ಇದೇ ಮೈದಾನದಲ್ಲಿ ಸಾರ್ವಜನಿಕ ಶೌಚಾಲಯವಿದ್ದು ಅವುಗಳ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಇವುಗಳನ್ನು ಸರಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡುವಂತೆ ಈ ಮನವಿ ಮಾಡಿಕೊಳ್ಳಲಾಯಿತು. ಈ ಸಂದರ್ಭ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿ ಗೌಡ, ಮಿನಾಜ್ ಪ್ರವೀಣ್, ಸತೀಶ್ ಪೈ, ವಸಂತ ಭಟ್, ವಿನೋದ್, ರಮೇಶ್ ಹಾಗೂ ಸಮಿತಿ ಸದಸ್ಯರು ಹಾಜರಿದ್ದರು.