ನಾಪೆÇೀಕ್ಲು, ನ. 26: ಖಾತೆ ವರ್ಗಾವಣೆಗೆ ಸಂಬಂಧಿಸಿದಂತೆ ಸರ್ಕಾರ ಸರಳೀಕೃತ ಸುತ್ತೋಲೆಯನ್ನು ಹೊರಡಿಸಿದ್ದು ಅಗತ್ಯವಿರುವ ಪ್ರಮಾಣಪತ್ರಗಳನ್ನು ಮಾತ್ರ ಕಂದಾಯ ಇಲಾಖೆಗೆ ಸಲ್ಲಿಸಿದರೆ ಸಾಕು. ಶುಲ್ಕವನ್ನು ವಿಧಿಸಿಲ್ಲ. ರೈತರು ಈ ಬಗ್ಗೆ ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ನಾಪೆÇೀಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಅಜ್ಜಿಮುಟ್ಟ ಕಾಂಕ್ರಿಟ್ ರಸ್ತೆಯ ಉದ್ಘಾಟನೆ ಹಾಗೂ ಡಾಮರೀಕರಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಪೌತಿ ಖಾತೆ ಪಡೆದುಕೊಳ್ಳಲು ಸರ್ಕಾರ ಕಾನೂನು ಸರಳೀಕರಣ ಮಾಡಿದೆ ಫಲಾನುಭವಿಗಳು ವಂಶಾವಳಿ ಪಟ್ಟಿ, ಪ್ರಮಾಣ ಪತ್ರ ನೀಡಬೇಕು. ಅದು ಸಾಧ್ಯವಿಲ್ಲದಿದ್ದರೆ ಅಧಿಕಾರಿಗಳೇ ಸ್ಥಳಕ್ಕೆ ಬಂದು ಖುದ್ದು ಪರಿಶೀಲನೆ ಮಾಡಬೇಕು. ಮರಣ ದೃಢೀಕರಣ ಪತ್ರ ಇದ್ದರೆ ನೀಡಬಹುದು. ಸಾಧ್ಯವಿಲ್ಲದಿದ್ದರೆ, ಪ್ರಮಾಣ ಪತ್ರ ನೀಡಿದರೆ ಸಾಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ, ಅಜ್ಜಿಮುಟ್ಟ ರಸ್ತೆ ಡಾಮರೀಕರಣಕ್ಕೆ ಶಾಸಕ ಕೆ.ಜಿ.ಬೋಪಯ್ಯ ಅನುದಾನ ನೀಡಿ ಸಹಕರಿಸಿದ್ದಾರೆ. ನೆಲಜಿ ರಸ್ತೆಯಿಂದ ಕೂರುಳಿ ಮೂಲಕ ನಾಪೆÇೀಕ್ಲು ಕೊಡವ ಸಮಾಜಕ್ಕೆ ಸಂಪರ್ಕ ಕಲ್ಪಿಸಲು ಪ್ರಧಾನ ಮಂತ್ರಿ ಗ್ರಾಮ ರೋಜ್‍ಗಾರ್ ಯೋಜನೆಯಡಿಯಲ್ಲಿ ರಸ್ತೆ ನಿರ್ಮಿಸಲು ಸಹಕಾರ ನೀಡಬೇಕು. ಇದರಿಂದ ಎರಡು ಗ್ರಾಮ ಮತ್ತು ಎರಡು ಗ್ರಾಮ ಪಂಚಾಯಿತಿಗೆ ಸಂಪರ್ಕ ಕಲ್ಪಿಸುವಂತಾಗುತ್ತದೆ 20 ಲಕ್ಷ ವೆಚ್ಚದಲ್ಲಿ ಅಜ್ಜಿಮುಟ್ಟ ರಸ್ತೆಯಲ್ಲಿ ನಿರ್ಮಿಸಲಾಗಿರುವ 210 ಮೀ. ಕಾಂಕ್ರಿಟ್ ರಸ್ತೆ ಈಗಾಗಲೇ ಸಿದ್ಧವಾಗಿದೆ. ಮುಂದೆ 5 ಲಕ್ಷ ರೂ.ಗಳ ಡಾಮರೀಕರಣಕ್ಕೆ ಭೂಮಿ ಪೂಜೆ ನಡೆಸಲಾಗಿದೆ. ಎಂದರು.

ಮಂಡೀರ ಕುಟುಂಬಸ್ಥರು ನಮಗೆ ಭಾಗಮಂಡಲ-ತಲಕಾವೇರಿ ವ್ಯವಸ್ಥಾಪನಾ ಸಮಿತಿಯಲ್ಲಿ ಖಾಯಂ ಸದಸ್ಯತ್ವ ನೀಡಬೇಕು ಹಾಗೂ ಅಜ್ಜಿಮುಟ್ಟ ಸಂಪರ್ಕ ರಸ್ತೆ, ವೆಂಕಟೇಶ್ವರ ದೇವಾಲಯ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ರೈತರ ಪರವಾಗಿ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ವಿವಿಧ ದಾಖಲಾತಿಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ನಾಪೆÉÇೀಕ್ಲು ಬಿಜೆಪಿ ಶಕ್ತಿ ಕೆಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಹಿರಿಯರಾದ ಅರೆಯಡ ಡಿ.ಸೋಮಪ್ಪ, ಎನ್.ಎಸ್.ಉದಯಶಂಕರ್, ಮಡಿಕೇರಿ ತಾಲೂಕು ರೈತ ಮೋರ್ಚಾದ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಕೇಲೇಟಿರ ಮಾಲ ಬೋಪಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅರೆಯಡ ಅಶೋಕ್, ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಸುಶೀಲಮ್ಮ, ಶಕ್ತಿ ಕೇಂದ್ರದ ಉಪಾಧ್ಯಕ್ಷ ಕೇಲೇಟಿರ ದಿಪು ದೇವಯ್ಯ, ಕೇಲೇಟಿರ ರತ್ನಾ, ಕಂಗಾಂಡ ಜಾಲಿ ಪೂವಪ್ಪ, ಮಂಡೀರ ರಾಜಪ್ಪ, ಅರೆಯಡ ರತ್ನಾ ಪೆಮ್ಮಯ್ಯ, ಶ್ರೀನಿವಾಸ್, ಬಾಳೆಯಡ ಮೇದಪ್ಪ, ಚೋಕಿರ ಸಜಿತ್ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

- ದುಗ್ಗಳ