ಚೆಟ್ಟಳ್ಳಿ, ನ. 26: ಇಲ್ಲಿಗೆ ಸಮೀಪದ ಕೊಳಂಬೆ ಎಸ್ಟೇಟ್ ಎಂಬಲ್ಲಿ ಕೋಗಿಲಹಳ್ಳದ ತೋಟವೊಂದರಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಭಾರೀ ಗಾತ್ರದ ಹುಲಿಯ ಚಲನ-ವಲನ ಸೆರೆ ಸಿಕ್ಕಿದೆ. ಇತ್ತೀಚೆಗೆ ಈ ವ್ಯಾಪ್ತಿಯಲ್ಲಿ ಹುಲಿ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಕಂಬೀರಂಡ ನಿತಿನ್ ಎಂಬವರ ತೋಟದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ನಿನ್ನೆ ರಾತ್ರಿ ಹುಲಿ ತೋಟದಲ್ಲಿ ಅಡ್ಡಾಡಿರುವುದು ಕ್ಯಾಮರಾದಲ್ಲಿ ಸೆರೆ ಸಿಕ್ಕಿದೆ. ಹುಲಿ ಸೆರೆಗೆ ಇಲಾಖೆ ಕ್ರಮಕೈಗೊಂಡಿದೆ. -ಪಪ್ಪು