ಚೆಟ್ಟಳ್ಳಿ, ನ. 27: ಕೊಡಗು ಜಿಲ್ಲೆಯ 2020-21ನೇ ಸಾಲಿನ ಜಿಲ್ಲಾ ಫೈಝೀಜ್ ಅಧ್ಯಕ್ಷರಾಗಿ ನೌಷಾದ್ ಫೈಝಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಹಸೈನಾರ್ ಫೈಝಿ ಶನಿವಾಸಂತೆ, ಕೋಶಾಧಿಕಾರಿಯಾಗಿ ಹನೀಫ್ ಫೈಝಿ ಗುಂಡಿಗೆರೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹಮೀದ್ ಫೈಝಿ ಕೊಟ್ಟಮುಡಿ, ಕುಂಞÂ ಅಹ್ಮದ್ ಫೈಝಿ ಕೊಂಡಂಗೇರಿ ಆಯ್ಕೆಯಾಗಿದ್ದಾರೆ. ಸಹ ಕಾರ್ಯದರ್ಶಿಯಾಗಿ ಉನೈಸ್ ಫೈಝಿ ಪೆÇನ್ನತ್ಮೊಟ್ಟೆ, ಶಮೀರ್ ಫೈಝಿ ಹೊಸತೋಟ ಹಾಗೂ 14 ಸದಸ್ಯರು ಕೊಡಗು ಜಿಲ್ಲಾ ಫೈಝೀಝ್ ಅಸೋಸಿಯೇಷನ್ ಸಮಿತಿಗೆ ಆಯ್ಕೆಯಾಗಿದ್ದಾರೆ.
ಸುಂಟಿಕೊಪ್ಪದ ಪಟ್ಟಿಕಾಡ್ ಜಾಮಿಯ ನೂರಿಯ ಜೂನಿಯರ್ ಕಾಲೇಜು, ಪಾಣಕ್ಕಾಡ್ ಸಯ್ಯಿದ್ ಮುಹಮ್ಮದ್ ಅಲಿ ಶಿಹಾಬ್ ತಂಙಲ್ ಸ್ಮಾರಕ ಭವನದಲ್ಲಿ ಕೊಡಗು ಜಿಲ್ಲಾ ಫೈಝೀಝ್ ಅಸೋಸಿಯೇಷನ್ ಮಹಾಸಭೆಯು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಗೂ ಜಿಲ್ಲಾ ನಾಇಬ್ ಖಾಝಿ ಶೈಖುನಾ ಅಬ್ದುಲ್ಲ ಫೈಝಿ ಎಡಪಾಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಬ್ದುಲ್ಲಾ ಸಲಾಂ ಫೈಝಿ ಎಡಪಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಉಮರ್ ಫೈಝಿ, ಹಮೀದ್ ಫೈಝಿ,ಆರಿಫ್ ಫೈಝಿ ಇದ್ದರು. ಕರ್ನಾಟಕ ರಾಜ್ಯ ಫೈಝೀಝ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಿತ್ತಬೈಲು ಸ್ವಾಗತಿಸಿ, ಹಸೈನಾರ್ ಫೈಝಿ ವಂದಿಸಿದರು.