ಕುಶಾಲನಗರ, ನ. 27: ವಿವಿಧ ಇಲಾಖೆಗಳಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಭಾಗ್ಯ ಯೋಜನೆಯನ್ನು ಜಾರಿಗೆ ತರುವ ಮೂಲಕ ಅವರ ಶ್ರೇಯೋಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕು ಎಂದು ಕೊಡಗು ಜಿಲ್ಲಾ ಎಸ್ಸಿ-ಎಸ್ಟಿ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಹಾಗೂ ನಿವೃತ್ತ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದಪ್ಪ ಒತ್ತಾಯಿಸಿದರು.

ಸ್ಥಳೀಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಎಸ್ಸಿ-ಎಸ್ಟಿ ನಿವೃತ್ತ ಸರ್ಕಾರಿ ನೌಕರರ ಸಂಘದ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ಹೊರತುಪಡಿಸಿ ಇತರ ರಾಜ್ಯಗಳಲ್ಲಿ ನಿವೃತ್ತ ನೌಕರರಿಗೆ ಪ್ರತ್ಯೇಕ ವೈದ್ಯಕೀಯ ವೆಚ್ಚಕ್ಕಾಗಿ 500 ರಿಂದ 1000 ವರೆಗೆ ಪ್ರತಿ ತಿಂಗಳು ನೀಡಲಾಗುತ್ತಿದೆ. ರಾಜ್ಯದಲ್ಲಿ ಜಾರಿ ಇರುವ ಜ್ಯೋತಿ ಸಂಜೀವಿನಿ ಹಾಗೂ ಆಯುಷ್ಮಾನ್ ಯೋಜನೆಯಲ್ಲಿ ನಿವೃತರಿಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಪಿಂಚಣಿಗಾಗಿ ಕಚೇರಿ ಅಲೆದಾಟ ಮಾಡಬೇಕಾದ ಪರಿಸ್ಥಿತಿ ಇದೆ. ಅಲ್ಲದೆ ಇನ್ನಿತರ ಭತ್ಯೆಗಳು ಕೂಡ ಸಿಗುತ್ತಿಲ್ಲ. ನಿವೃತ್ತರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಬಾರದು ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಯು.ಟಿ. ರಾಮಯ್ಯ ಹಿಂದಿನ ಸಾಲಿನ ಮಹಾಸಭೆ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು.

ನಿವೃತ್ತ ನೌಕರರ ಸಮಸ್ಯೆಗಳ ಕುರಿತು ಹಾಗೂ ಮುಂದಿನ ಸಾಲಿನಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ನಿವೃತ್ತ ಪೆÇಲೀಸ್ ಅಧಿಕಾರಿ ಹೆಚ್.ಕೆ. ರವೀಂದ್ರನಾಥ್, ನಿವೃತ್ತ ಆರೋಗ್ಯಾಧಿಕಾರಿ ಹೆಚ್.ಕೆ. ರಾಜಪ್ಪ, ನಿವೃತ್ತ ಶಿಕ್ಷಣಾಧಿಕಾರಿ ಲಿಂಗನಾಯಕ್, ಸೋಮಣ್ಣ ಮಾತನಾಡಿದರು.

ಈ ಸಂದರ್ಭ ಸಂಘದ ಗೌರವಾಧ್ಯಕ್ಷ ನಿವೃತ್ತ ಪ್ರಾಂಶುಪಾಲ ಪೆÇ್ರ. ಹೆಚ್.ಕೆ. ಕೇಶವಯ್ಯ, ಉಪಾಧ್ಯಕ್ಷ ಪೆÇಲೀಸ್ ನಿವೃತ್ತ ನೌಕರ ಬಿ.ಡಿ. ಅಣ್ಣಯ್ಯ, ಖಜಾಂಚಿ ಆಹಾರ ಇಲಾಖೆ ನಿವೃತ್ತ ಅಧಿಕಾರಿ ನಿಂಗರಾಜು ಉಪಸ್ಥಿತರಿದ್ದರು. ಗೋವಿಂದರಾಜ್ ಪ್ರಾರ್ಥಿಸಿದರು. ರಾಮಯ್ಯ ಸ್ವಾಗತಿಸಿ, ವಂದಿಸಿದರು. ನೂತನವಾಗಿ ಸೇರ್ಪಡೆಗೊಂಡ ಸಣ್ಷಯ್ಯ, ರವೀಂದ್ರನಾಥ್, ಬೆಳ್ಳಿಯಪ್ಪ, ನಟರಾಜ್, ಸೋಮಣ್ಣ, ಚನ್ನರಾಜ್ ಅವರುಗಳಿಗೆ ಹೂ ಗುಚ್ಛ ನೀಡಿ ಗೌರವಿಸಲಾಯಿತು.

ಮೃತಪಟ್ಟ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಿತು. ನಿರ್ದೇಶಕರಾಗಿ ಸಿದ್ದಪ್ಪ, ಅಣ್ಣಯ್ಯ, ಕೇಶವಯ್ಯ, ರಾಮಯ್ಯ, ಸೋಮಣ್ಣ, ಸಣ್ಣಯ್ಯ, ರವೀಂದ್ರನಾಥ್ ಸೇರಿದಂತೆ 13 ಮಂದಿ ಅವಿರೋಧವಾಗಿ ಆಯ್ಕೆಯಾದರು.