ಸೋಮವಾರಪೇಟೆ, ನ. 25: ರಾಜ್ಯದ ಎಲ್ಲಾ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಯನ್ನು ನಿಗದಿಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಜ್ಯ ಹೈಕೋರ್ಟ್‍ನ ಏಕಸದಸ್ಯ ಪೀಠ ಅಸಿಂಧುಗೊಳಿಸಿ ಹೊರಡಿಸಿದ್ದ ಆದೇಶಕ್ಕೆ ವಿಭಾಗೀಯ ಪೀಠ ಇಂದು ತಡೆಯಾಜ್ಞೆ ನೀಡಿರುವದರಿಂದ, ಜಿಲ್ಲೆಯ ಮೂರೂ ಪ.ಪಂ.ಗಳಲ್ಲಿ ಈ ಹಿಂದೆ ಇದ್ದ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರ ಮುಂದುವರೆಯಲಿದೆ.ಮೀಸಲಾತಿಯನ್ನು ಪ್ರಶ್ನಿಸಿ ಜಿಲ್ಲೆಯ ಜನಪ್ರತಿನಿಧಿಗಳೂ ಸೇರಿದಂತೆ ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರ ಹಾವು ಏಣಿ ಆಟದಂತಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‍ನ ಏಕಸದಸ್ಯ ಪೀಠ ಕಳೆದ ತಾ. 19 ರಂದು ಸರ್ಕಾರದ ಮೀಸಲಾತಿಯನ್ನು ರದ್ದುಗೊಳಿಸಿದ್ದರಿಂದ, ಈ ಮೀಸಲಾತಿಯಡಿ ಅಧಿಕಾರಕ್ಕೇರಿದ್ದ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರ ಅಮಾನತು ಸ್ಥಿತಿಯಲ್ಲಿತ್ತು.
ಇಂದು ಹೈಕೋರ್ಟ್‍ನ ವಿಭಾಗೀಯ ಪೀಠದ ನ್ಯಾಯಾಧೀಶರುಗಳಾದ ನಾಗರತ್ನ ಮತ್ತು ಸಂಜಯ್‍ಗೌಡ ಅವರುಗಳು ಅರ್ಜಿಯ ವಿಚಾರಣೆ ನಡೆಸಿದ್ದು, ಸಂಸ್ಥೆಗಳ ಜನಪ್ರತಿನಿಧಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರ ಹಾವು ಏಣಿ ಆಟದಂತಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‍ನ ಏಕಸದಸ್ಯ ಪೀಠ ಕಳೆದ ತಾ. 19 ರಂದು ಸರ್ಕಾರದ ಮೀಸಲಾತಿಯನ್ನು ರದ್ದುಗೊಳಿಸಿದ್ದರಿಂದ, ಈ ಮೀಸಲಾತಿಯಡಿ ಅಧಿಕಾರಕ್ಕೇರಿದ್ದ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರ ಅಮಾನತು ಸ್ಥಿತಿಯಲ್ಲಿತ್ತು.
ಇಂದು ಹೈಕೋರ್ಟ್‍ನ ವಿಭಾಗೀಯ ಪೀಠದ ನ್ಯಾಯಾಧೀಶರುಗಳಾದ ನಾಗರತ್ನ ಮತ್ತು ಸಂಜಯ್‍ಗೌಡ ಅವರುಗಳು ಅರ್ಜಿಯ ವಿಚಾರಣೆ ನಡೆಸಿದ್ದು, (ಮೊದಲ ಪುಟದಿಂದ) ಕಳೆದ ಅಕ್ಟೋಬರ್ 8ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಮೀಸಲಾತಿ ಆದೇಶದ ವಿರುದ್ಧ ಹಲವಷ್ಟು ಮಂದಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಮಧ್ಯೆ ಅಕ್ಟೋಬರ್ 20ರಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯೂ ನಿಗದಿಯಾಗಿತ್ತು.
ಚುನಾವಣೆಗೆ ಒಂದು ದಿನ ಇರುವಂತೆಯೇ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಚುನಾವಣಾ ಪ್ರಕ್ರಿಯೆ ರದ್ದಾಗಿತ್ತು. ನಂತರ ಅ. 22ರಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ತಡೆಯಾಜ್ಞೆಯನ್ನು ತೆರವುಗೊಳಿಸಿ, ಆಯ್ಕೆ ಪ್ರಕ್ರಿಯೆಯ ವಿಚಾರಣೆಯನ್ನು ಕಾಯ್ದಿರಿಸಿ, ಅ. 8 ರಂದು ರಾಜ್ಯ ಸರ್ಕಾರ ಪ್ರಕಟಿಸಿರುವ ಮೀಸಲಾತಿಯಂತೆ ನ.10ರ ಒಳಗೆ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದ್ದರು.
ಅದರಂತೆ ಕೊಡಗಿನ ಸೋಮವಾರಪೇಟೆ, ವೀರಾಜಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿಗಳಿಗೆ ನ. 3 ರಂದು ಚುನಾವಣೆ ನಡೆದು, ಜಿಲ್ಲೆಯ ಮೂರೂ ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ತನ್ನದಾಗಿಸಿಕೊಂಡಿತ್ತು.
ಇದಾಗಿ 16 ದಿನಗಳ ತರುವಾಯ ಮತ್ತೆ ಹೈಕೋರ್ಟ್‍ನಲ್ಲಿ ಅರ್ಜಿಯ ವಿಚಾರಣೆ ನಡೆದು ಮೀಸಲಾತಿಯ ಆದೇಶವನ್ನು ರದ್ದುಗೊಳಿಸಿದ ಪರಿಣಾಮ ಸರ್ಕಾರದ ಮೀಸಲಾತಿಯಡಿ ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದವರ ಸ್ಥಾನ ಅಮಾನತು ಸ್ಥಿತಿಯಲ್ಲಿತ್ತು.
ಕಳೆದ ತಾ. 19ರಂದು ಹೈಕೋರ್ಟ್‍ನ ಏಕಸದಸ್ಯ ಪೀಠ ನೀಡಿದ ತೀರ್ಪಿಗೆ ಇಂದು ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆಯವರೆಗೂ ಅಧ್ಯಕ್ಷ-ಉಪಾಧ್ಯಕ್ಷರು, ಈ ಹಿಂದಿನ ಚುನಾವಣೆಯ ಫಲಿತಾಂಶದಂತೆಯೇ ಮುಂದುವರೆಯಲಿದ್ದಾರೆ.
ವಿಭಾಗೀಯ ಪೀಠದ ಆದೇಶದಿಂದ ಸದ್ಯದ ಮಟ್ಟಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೊಗದಲ್ಲಿ ಗೆಲುವಿನ ನಗೆ ಮೂಡಿದ್ದರೂ ಸಹ, ಅರ್ಜಿಯ ವಿಚಾರಣೆ ಹೈಕೋರ್ಟ್‍ನಲ್ಲಿ ನಡೆಯುತ್ತಿರುವದರಿಂದ ಅಧಿಕಾರ ಹಾವು-ಏಣಿ ಆಟದಂತಾಗಿದೆ.
ಅದರಂತೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿಯ ನಳಿನಿ ಗಣೇಶ್, ಉಪಾಧ್ಯಕ್ಷರಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಬಿ. ಸಂಜೀವ, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿಯ ಜಯವರ್ಧನ್, ಉಪಾಧ್ಯಕ್ಷರಾಗಿ ಜೆಡಿಎಸ್ ಅಭ್ಯರ್ಥಿ ಸುರಯ್ಯಾ ಬಾನು, ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿ ಬಿಜೆಪಿಯ ಟಿ.ಆರ್. ಸುಶ್ಮಿತಾ, ಉಪಾಧ್ಯಕ್ಷರಾಗಿ ಹರ್ಷವರ್ಧನ್ ಅವರುಗಳು ಮುಂದುವರೆಯಲಿದ್ದಾರೆ.
- ವಿಜಯ್