ಸುಂಟಿಕೊಪ್ಪ, ನ. 25: ಆಹಾರ ಅರಸಿ ಬಂದ ಕಾಡಾನೆಯೊಂದು ಸೋಲಾರ್ ಬೇಲಿಗೆ ಅಕ್ರಮವಾಗಿ ಸಂಪರ್ಕಗೊಳಿಸಿದ್ದು ಕಾಡಾನೆ ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.
ಮೂಲತಃ ಹಾಕತ್ತೂರು ನಿವಾಸಿ, ಎಂ.ಎಸ್. ಮಹಮ್ಮದ್ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗೋವೆ ಪೈಸಾರಿಯಲ್ಲಿ ತಮಗೆ ಸೇರಿದ 10 ಎಕ್ರೆ ಜಾಗದಲ್ಲಿ ಮರಗೆಣಸು ಕೃಷಿ ಮಾಡಿದ್ದಾರೆ. ಜಾಗದ ಸುತ್ತಲೂ ಸೋಲಾರ್ ವಿದ್ಯುತ್ ಬೇಲಿಯನ್ನು ನಿರ್ಮಿಸ ಲಾಗಿತ್ತು. ಈ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ ಕೊಂಡಿದ್ದರು. 2 ದಿನಗಳ ಹಿಂದೆ ಆಹಾರ ಅರಸಿಕೊಂಡು ಬಂದಿದ್ದ ಅಂದಾಜು 25 ವರ್ಷದ ಒಂಟಿಸಲಗ ಬೇಲಿಗೆ ಅಳವಡಿಸಿದ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದೆ. ಬುಧವಾರ ಗ್ರಾಮದ ಸುತ್ತ ಮುತ್ತಲಿನ
(ಮೊದಲ ಪುಟದಿಂದ) ಜನತೆ ಕಾಡಾನೆ ಸತ್ತು ಬಿದ್ದಿರುವ ಬಗ್ಗೆ ಮಾತನಾಡಿ ಕೊಳ್ಳುತ್ತಿದ್ದು, ಗಸ್ತಿನಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹುಡುಕಾಟ ನಡೆಸಿದಾಗ ವಿದ್ಯುತ್ ಸ್ಪರ್ಶಗೊಂಡು ಕಾಡಾನೆ ಸತ್ತು ಬಿದ್ದಿರುವುದು ಕಂಡು ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಾದ ಆರ್.ಎಫ್.ಓ. ಅನನ್ಯಕುಮಾರ್, ಎಸಿಎಫ್ ನೆಹರು, ವಲಂiÀi ಅರಣ್ಯಾಧಿಕಾರಿ ಅನಿಲ್ ಡಿಸೋಜ, ಹಾಗೂ ಸಿಬ್ಬಂದಿಗಳು, ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಡಿ.ಎಸ್. ಪುನೀತ್, ಸಿಬ್ಬಂದಿಗಳು ಹಾಗೂ ಸೆಸ್ಕ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಪಶುವೈದ್ಯಾಧಿಕಾರಿ ಡಾ. ಮುಜೀಬ್ ರೆಹಮಾನ್ ಖಾನ್ ಸ್ಥಳದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು.
ಮಾಲೀಕರ ವಿರುದ್ಧ ಕ್ರಮ
ಸೋಲಾರ್ ಬೇಲಿ ಅಳವಡಿಕೆಗೆ ಸೋಲಾರ್ ಬ್ಯಾಟರಿ ಅಳವಡಿಸದೆ ತೋಟದ ಮಾಲೀಕರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ. ಹಾಗಾಗಿ ಕಾಡಾನೆ ಸಾವನ್ನಪ್ಪಿದೆ. ಈ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ತೋಟದ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಿ, ಕ್ರಮ ಕೈಗೊಳ್ಳಲಾಗುವುದೆಂದು ಡಿಎಫ್ಓ ಪ್ರಭಾಕರನ್ ತಿಳಿಸಿದ್ದಾರೆ.