ಕೂಡಿಗೆ, ನ. 25: ಐಎನ್‍ಟಿಯುಸಿ ಕಾರ್ಮಿಕ ಮಹಿಳೆಯರಿಗೆ ಕಾಪೆರ್Çೀರೇಷನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಕೂಡಿಗೆ ಬ್ಯಾಂಕ್ ಸಭಾಂಗಣದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು. ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ಅಜ್ಜಳ್ಳಿ ರವಿ ನೆರವೇರಿಸಿದರು. ನಂತರ ಮಾತನಾಡಿದ ಅವರು, ಕಾರ್ಮಿಕರು ಸ್ವ ಉದ್ಯೋಗ ತರಬೇತಿಯನ್ನು ಪಡೆದು ವಿವಿಧ ಹಂತಗಳಲ್ಲಿ ಸ್ಥಳೀಯ ಬ್ಯಾಂಕ್‍ಗಳಲ್ಲಿ ಸಾಲ ಸೌಲಭ್ಯ ಗಳನ್ನು ಹೊಂದಿಕೊಂಡು ಆರ್ಥಿಕವಾಗಿ ಮುಂದುವರೆಯಬೇಕೆಂದರು.

ಜಿಲ್ಲಾ ಐಎನ್‍ಟಿಯುಸಿ ಅಧ್ಯಕ್ಷ ಗೋವಿಂದರಾಜದಾಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಾಪೆರ್Çೀರೇಷನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಡಾ. ಸುರೇಶ್ ಪಾಲ್ಗೊಂಡಿದ್ದರು. ಸಂಸ್ಥೆಯ ಅಧಿಕಾರಿ ಸಲ್ಲಾವುದ್ಧೀನ್ ಹರೀಶ್ ಹಾಜರಿದ್ದರು.