*ಗೋಣಿಕೊಪ್ಪ, ನ. 25: ರೂ. 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಗೋಣಿಕೊಪ್ಪ - ತಿತಿಮತಿ ರಸ್ತೆ ಡಾಂಬರೀಕರಣಕ್ಕೆ ಮರು ಚಾಲನೆ ದೊರೆತಿದೆ.

ಶಾಸಕ ಕೆ.ಜಿ. ಬೋಪಯ್ಯ ಅವರು ರಸ್ತೆ ಕಾಮಗಾರಿಗೆ ಕೆಲ ತಿಂಗಳುಗಳ ಹಿಂದೆಯೇ ಚಾಲನೆ ನೀಡಿದ್ದರು.

ಆದರೆ ಕೊರೊನಾ ಹಿನ್ನೆಲೆ ಕಾಮಗಾರಿ ಚಟುವಟಿಕೆಯನ್ನು ತಾತ್ಕಲಿಕವಾಗಿ ತಡೆಹಿಡಿಯಲಾಗಿತ್ತು. ಇದೇ ಸಂದರ್ಭ ಮಳೆಯು ಪ್ರಾರಂಭವಾದ್ದರಿಂದ ಡಾಂಬರೀಕರಣ ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಇದೀಗ ಮತ್ತೆ ಡಾಂಬರಿಕರಣ ಪ್ರಾರಂಭವಾಗಿದ್ದು, ಮಳೆಯಿಂದ ಅಲ್ಲಲ್ಲಿ ಹೊಂಡ ಬಿದ್ದ ಹಾಗೂ ಕಿತ್ತುಹೋದ ರಸ್ತೆಗೆ ಡಾಂಬರೀಕರಣ ಮಾಡುತ್ತಾ ಪೂರ್ಣ ಕಾಮಗಾರಿ ನಡೆಸಲಾಗುತ್ತಿದೆ. ಕೆಲದಿನಗಳಲ್ಲಿ ಡಾಂಬರೀಕರಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಸಣ್ಣುವಂಡ ನವೀನ್ ಮಾಹಿತಿ ನೀಡಿದ್ದಾರೆ.