ಪೆರಾಜೆ, ನ. 25: ಚಿಗುರು ಕ್ರೀಡಾ ಮತ್ತು ಕಲಾ ಯುವಕಮಂಡಲ ಪೆರಾಜೆ ಇವರ ಆಶ್ರಯದಲ್ಲಿ ನಡೆದ ‘ಹುತ್ತರಿ’ ಮತ್ತು ‘ದೀಪಾವಳಿ’ ವಿಷಯಗಳ ಕುರಿತ ಚಿಗುರು ಅರೆಭಾಷೆ ಕವನ ಸ್ಪರ್ಧೆ 2020ರ ಫಲಿತಾಂಶ ಪ್ರಕಟವಾಗಿದ್ದು, ಪ್ರಥಮ ಬಹುಮಾನವನ್ನು ಲಿಖಿತಾ ಗುಡ್ಡೆಮನೆ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಕ್ರಮವಾಗಿ ಮನೋಜ್ ಕುಡೆಕಲ್ಲು, ಸಂಗೀತ ರವಿರಾಜ್ ಚೆಂಬು ಪಡೆದುಕೊಂಡಿದ್ದಾರೆ.
ಕವನ ಸ್ಪರ್ಧೆಯ ತೀರ್ಪುಗಾರರಾಗಿ ಅರೆಭಾಷೆ ಬರಹಗಾರ ಡಾ.ಪುನೀತ್ ರಾಘವೇಂದ್ರ ಕುಂಟುಕಾಡು, ಕವಿ ಉದಯ ಭಾಸ್ಕರ ಸುಳ್ಯ, ಅರೆಭಾಷೆ ಕವಿ ಯತಿಶ್ಯಾಂ ಕುಂಬಳಚೇರಿ ಅವರು ಸಹಕರಿಸಿದರು.
ಬಹುಮಾನ ವಿತರಣೆ ಸಂದರ್ಭ ಚಿಗುರು ಯುವಕ ಮಂಡಲದ ಅಧ್ಯಕ್ಷ ಕಿರಣ್ ಕುಂಬಳಚೇರಿ, ಕಾರ್ಯದರ್ಶಿ ದಿವಾಕರ ಮಜಿಕೋಡಿ, ಸಂಘದ ಸಾಂಸ್ಕøತಿಕ ಅಧ್ಯಕ್ಷ ಮಿಥುನ್ ಮಜಿಕೋಡಿ, ಕಾರ್ಯದರ್ಶಿ ಭವಿತ್ ಕುಂಬಳಚೇರಿ , ಮಾಜಿ ಅಧ್ಯಕ್ಷ ಶೀತಲ್ ಕುಂಬಳಚೇರಿ ಸೇರಿದಂತೆ ಯುವಕಮಂಡಲ ಪದಾಧಿಕಾರಿಗಳು, ಸದಸ್ಯರು ಇದ್ದರು.