ಮಡಿಕೇರಿ, ನ. 25: ಕೆ.ಎ. 19 ಎಸಿ 1797 ಸಂಖ್ಯೆಯ ಗೂಡ್ಸ್ ಲಾರಿಯೊಂದು ಕಳೆದ ಹಲವು ದಿನಗಳಿಂದ ಮೇಕೇರಿ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಕ್ಕೆ ತೆರಳುವ ನಡು ರಸ್ತೆಯಲ್ಲಿ ಕೆಟ್ಟು ನಿಂತಿದ್ದು ಇಂಜಿನ್ ಜಾಮ್ ಆಗಿರುವ ಕಾರಣ ಲಾರಿಯನ್ನು ಅಲ್ಲೇ ಬಿಟ್ಟು ವಾಹನ ಚಾಲಕ ತೆರಳಿದ್ದಾನೆ. ಸುಮಾರು 20 ರಿಂದ 30 ದಿನಗಳಾದರೂ ಲಾರಿ ಕಡೆ ಚಾಲಕನಾಗಲಿ ಲಾರಿ ಮಾಲೀಕನಾಗಲಿ ತಲೆ ಹಾಕಿಲ್ಲ.

ನಡು ರಸ್ತೆಯಲ್ಲೇ ವಾಹನ ಕೆಟ್ಟು ನಿಂತಿರುವುದರಿಂದ ಮೇಕೇರಿ ಅಂಗನವಾಡಿ ಕೇಂದ್ರಕ್ಕೆ ಪೌಷ್ಟಿಕ ಆಹಾರ ತರುವ ವಾಹನ ತೆರಳಲು ಕಷ್ಟವಾಗಿದ್ದು ಪೌಷ್ಟಿಕ ಆಹಾರ ಸರಬರಾಜಿಗೆ ಕಳೆದ ಹಲವು ದಿನಗಳಿಂದ ತೊಡಕಾಗಿದೆ. ಕೂಡಲೇ ಈ ಬಗ್ಗೆ ಪೆÇಲೀಸ್ ಇಲಾಖೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.