ನಾಪೆÉÇೀಕ್ಲು, ನ. 25: ಹಳೆತಾಲೂಕು ಬಳಿಯಿಂದ ನೆಲಜಿ ಗ್ರಾಮದ ರಸ್ತೆಗೆ ಸಂಪರ್ಕ ಕಲ್ಪಿಸುವ ಬೊಪ್ಪಂಡ ಐನ್ಮನೆಯ ಮುಂದೆ ಹಾದು ಹೋಗುವ ರಸ್ತೆ ಮಧ್ಯೆ ಕಳೆದ ಮಳೆಗಾಲದಲ್ಲಿ ಭಾರೀ ಗಾತ್ರದ ಮರವೊಂದು ಬಿದ್ದು ತಿಂಗಳುಗಳೇ ಕಳೆದರೂ ಮರ ಈಗಲೂ ಅಪಾಯದಲ್ಲಿದೆ. ಇದರ ಪಕ್ಕದಲ್ಲಿಯೇ ಅಂಗನವಾಡಿ ಕೇಂದ್ರ ಇದ್ದು, ಈ ಅಪಾಯದ ಮರದ ಕೆಳಗೆ ಮಕ್ಕಳು ಮತ್ತು ಸಾರ್ವಜನಿಕರು ದಿನಂಪ್ರತಿ ಸಂಚರಿಸುತ್ತಿದ್ದು. ಕೂಡಲೇ ಸಂಬಂಧಪಟ್ಟವರು ಮರವನ್ನು ತೆರವುಗೊಳಿಸದಿದ್ದಲ್ಲಿ ಮುಂದೆ ಭಾರೀ ಅನಾಹುತ ಸಂಭವಿಸಲಿದೆ. ಕೂಡಲೇ ಮರವನ್ನು ತೆರವುಗೊಳಿಸುವಂತೆ ಈ ವಿಭಾಗದ ನಾಗರಿಕರು ಮನವಿ ಮಾಡಿದ್ದಾರೆ.