ಕುಶಾಲನಗರ, ನ. 25: ಕುಶಾಲನಗರ ಸಮೀಪದ ಕೂಡಿಗೆ ರಸ್ತೆಯ ಒತ್ತಿನಲ್ಲಿರುವ ಅಮರನಾಥ್ ಬಡಾವಣೆ ನಿವಾಸಿಗಳಿಗೆ ಆಗುತ್ತಿದ್ದ ಕಿರಿಕಿರಿ ಸದ್ಯ ತಪ್ಪಿದೆ ಎಂದು ಬಡಾವಣೆ ನಿವಾಸಿಗಳು ತಿಳಿಸಿದ್ದಾರೆ. ಈ ಬಡಾವಣೆಯ ಸಮಸ್ಯೆಗಳ ಬಗ್ಗೆ ಶಕ್ತಿ ಪತ್ರಿಕೆಯಲ್ಲಿ ವರದಿಯಾದ ಬೆನ್ನಲ್ಲೇ ಪೊಲೀಸರು ತಕ್ಷಣ ಸ್ಪಂದಿಸಿ, ಗಸ್ತು ಮಾಡಿ ದಿನನಿತ್ಯ ಹುಡುಗರಿಂದ ಆಗುತ್ತಿದ್ದ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ ಎಂದು ಬಡಾವಣೆ ನಿವಾಸಿ ವಾಸುದೇವ್ ತಿಳಿಸಿದ್ದಾರೆ.
ಮನೆ ಮುಂಭಾಗದಲ್ಲಿ ಇದ್ದ ಖಾಲಿ ನಿವೇಶನದಲ್ಲಿ ಹುಡುಗರು ಕ್ರಿಕೆಟ್ ಮತ್ತಿತರ ಆಟ ಆಡುವುದರೊಂದಿಗೆ ಮನೆಗಳಿಗೆ ಹಾನಿ ಉಂಟಾಗುತ್ತಿತ್ತು. ಇದರೊಂದಿಗೆ ಲಾರಿ ಮತ್ತಿತರ ವಾಹನಗಳು ನಿಲುಗಡೆಗೊಂಡು ನಿವಾಸಿಗಳಿಗೆ ಕಿರಿಕಿರಿ ಉಂಟಾಗುತ್ತಿತ್ತು. ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಸಮಸ್ಯೆಗೆ ಪರಿಹಾರ ದೊರೆತಿದೆ. ಈ ಹಿನ್ನೆಲೆಯಲ್ಲಿ ಬಡಾವಣೆ ನಿವಾಸಿಗಳ ಪರವಾಗಿ ವಾಸುದೇವ್ ‘ಶಕ್ತಿ’ಗೆ ಹಾಗೂ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.