ಗೋಣಿಕೊಪ್ಪಲು, ನ.24: ಅಪರಾಧÀ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 11 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಜೆ.ಡಿ.ಹರೀಶ್‍ನನ್ನು ಬಂಧಿಸುವಲ್ಲಿ ಪೊನ್ನಂಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಹರೀಶ್ ನಿಟ್ಟೂರು, ಕಾರ್ಮಾಡು ನಿವಾಸಿಯಾಗಿದ್ದು, ಪೊಲೀಸರಿಂದ ತಲೆ ಮರೆಸಿಕೊಂಡಿದ್ದ. ಎಸ್.ಐ. ಡಿ.ಕುಮಾರ್ ಗಸ್ತಿನ ವೇಳೆ ಈತ ಸೆರೆ ಸಿಕ್ಕಿದ್ದು ಹರೀಶ್‍ನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಡಿವೈಎಸ್‍ಪಿ ಮಾರ್ಗದರ್ಶನದಲ್ಲಿ ಸಿಪಿಐ ರಾಮರೆಡ್ಡಿ ನಿರ್ದೇಶನದ ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭ ಎಎಸ್‍ಐ ಉದಯ ಕುಮಾರ್, ಪೊಲೀಸ್ ಸಿಬ್ಬಂದಿಗಳಾದ ಪ್ರಮೋದ್, ಮಹಾದೇವ ಸ್ವಾಮಿ, ಇತರರು ಹಾಜರಿದ್ದರು.