ನಾಪೆÉÇೀಕ್ಲು, ನ. 24: ಕಾರುಗುಂದ ಕೃಷಿ ಪತ್ತಿನ ಸಹಕಾರ ಸಂಘವು 2019-20ನೇ ಸಾಲಿನಲ್ಲಿ ಸುಮಾರು 16 ಲಕ್ಷ ರೂ.ಗಳ ನಿವ್ವಳ ಲಾಭಗಳಿಸಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಪಂಡ ರ್ಯಾಲಿ ಮಾದಯ್ಯ ಹೇಳಿದರು. ಅವರು ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸಂಘದಲ್ಲಿ ಒಟ್ಟು 1900 ಸದಸ್ಯರಿದ್ದು ಸಂಘದ ಸದಸ್ಯರಿಗಾಗಿ ವಾರ್ಷಿಕವಾಗಿ ಸುಮಾರು 8 ಕೋಟಿಗಳಷ್ಟು ಸಾಲವನ್ನು ವಿತರಿಸಲಾಗಿದ್ದು ಸಾಲ ವಸೂಲಾತಿಯಲ್ಲಿ ಸಂಘವು ‘ಎ’ ಗ್ರೇಡ್ ಹೊಂದಿದೆ ಎಂದು ತಿಳಿಸಿದರು. ಈ ಬಾರಿ ಸಂಘದಿಂದ ಸದಸ್ಯರಿಗೆ ಶೇ. 8 ಡಿವಿಡೆಂಡ್ ವಿತರಿಸಲು ತೀರ್ಮಾನಿಸಲಾಗಿದೆ ಎಂದ ಅವರು, ಸಂಘದ ಸರ್ವತೋಮುಖ ಅಭಿವೃದ್ಧಿಗೆ ಆಡಳಿತ ಮಂಡಳಿಯವರು ಮತ್ತು ಸದಸ್ಯರು ಸಹಕಾರ ನೀಡಿರುವುದರಿಂದ ಲಾಭಗಳಿಸಲು ಸಾಧ್ಯವಾಗಿದೆ ಎಂದರು. ಈ ಸಂದರ್ಭ ಆಡಳಿತ ಮಂಡಳಿಯ ಸದಸ್ಯರು ಮತ್ತು ಸಂಘದ ಕಾರ್ಯನಿರ್ವಣಾಧಿಕಾರಿ ಮತ್ತು ಸಂಘದ ಸದಸ್ಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.