ಮಾನವ ಒಂದು ಶ್ರೇಷ್ಠವಾದ ಭಾವನಾತ್ಮಕ ಜೀವಿ. ಜಗತ್ತಿನ ಎಲ್ಲಾ ಜೀವಿಗಳಿಗೂ ತಮ್ಮದೇ ಆದ ಜಾತಿ ಧರ್ಮವಿದೆ. ಅದರಲ್ಲೂ ಭಾರತ ವಿಶೇಷ ಸ್ಥಾನವನ್ನು ಪಡೆದಿದೆ. ವಿವಿಧ ಜಾತಿ ಜನಾಂಗ ಧರ್ಮದ ಜನರು ನೆಲೆಸಿದ್ದಾರೆ. “ವಸು ದೈವ ಕುಟುಂಬಕಂ” ಎಂಬಂತೆ ಭಕ್ತಾಧಿಗಳು ತಮ್ಮ ಆತ್ಮ ಸಂವೇದನೆಗಾಗಿ ಮಾನಸಿಕ ಶಾಂತಿಗಾಗಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವುದು ಸಾಮಾನ್ಯ ವಾಗಿದೆ. ಕೊಡಗಿನಲ್ಲಿ ಹಲವಾರು ಕ್ರೈಸ್ತ ಧರ್ಮೀಯರಿದ್ದಾರೆ. ಹಲವಾರು ಚರ್ಚುಗಳಿವೆ. ಕ್ರೈಸ್ತರ ಜಗದ್ಗುರುಗಳು ಪುಣ್ಯಕ್ಷೇತ್ರಗಳಲ್ಲಿರುವ ವಿಶೇಷತೆಯನ್ನು ಗುರುತಿಸಿ, “ಬಸಿಲಿಕ” (ಜಗತ್ತಿನ ಶ್ರೇಷ್ಠ ದೇವಾಲಯಕ್ಕೆ ಹೋಲುವಂತಿರುವ) ಎಂಬ ಮಾನ್ಯತೆಯನ್ನು ನೀಡಿರುವ ಪುಣ್ಯಕ್ಷೇತ್ರ ಮೈಸೂರು ಜಿಲ್ಲೆಯ ಕೆ. ಆರ್. ನಗರ ತಾಲೂಕಿನ ಡೋರ್ನಹಳ್ಳಿದೆ. ಇದು ವಿಶ್ವವಿಖ್ಯಾತ ಮಹಾಸಂತ ಅಂತೋಣಿ ಅವರ ಬಸಿಲಿಕಾ. ಇಲ್ಲಿ ಆರೋಗ್ಯಕ್ಕಾಗಿ ಪ್ರಾರ್ಥಿಸಿದರೆ ಉತ್ತಮ ಆರೋಗ್ಯವು ದೊರಕುವುದಲ್ಲದೆ ಕಳೆದು ಹೋದ ವಸ್ತುವಿಗಾಗಿ ಪ್ರಾರ್ಥಿಸಿದರೆ ಆ ವಸ್ತುವು ನಮ್ಮ ಕೈ ಸೇರುತ್ತದೆ ಎನ್ನುವುದು ಭಕ್ತಾದಿಗಳ ಆಳವಾದ ನಂಬಿಕೆ. ಮೈಸೂರಿನಿಂದ ಹುಣಸೂರು ಮಾರ್ಗವಾಗಿ ಹಾಸನಕ್ಕೆ ಹೋಗುವಾಗ ದೊಡ್ಡೆಕೊಪ್ಪಲು ಎಂಬ ಗ್ರಾಮದ ಬಳಿ ಬಲಕ್ಕೆ ತಿರುಗಿ ಎರಡು ಕಿ. ಮಿ. ಕ್ರಮಿಸಿದರೆ ಈ ಪುಣ್ಯಕ್ಷೇತ್ರವು ಸಿಗುತ್ತದೆ. ಕೆ. ಆರ್. ನಗರದಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿ ದೊಡ್ಡೆಕೊಪ್ಪಲು ಊರಿನಲ್ಲಿ ಎಡಕ್ಕೆ ತಿರುಗಿದರೆ ಎರಡು ಕಿ. ಮಿ. ಅಂತರದಲ್ಲಿ ಈ ಪ್ರಸಿದ್ಧ ಸ್ಥಳ ದೊರಕುತ್ತದೆ.

ಮೈಸೂರಿನಿಂದ ಸುಮಾರು 40 ಕಿ. ಮೀ. ದೂರ, ಕುಶಾಲನಗರದಿಂದ 60 ಕಿ. ಮೀ. ಅಂತರದಲ್ಲಿ ಈ ಪುಣ್ಯಕ್ಷೇತ್ರವಿದೆ. ರಸ್ತೆ ಮತ್ತು ರೈಲು ಮಾರ್ಗವಾಗಿ ಈ ಪುಣ್ಯಕ್ಷೇತ್ರಕ್ಕೆ ಭಕ್ತಾದಿಗಳು ತಲುಪಬಹುದು. ಈ ಪುಣ್ಯಕ್ಷೇತ್ರದ ಎಡ ಭಾಗದಲ್ಲಿ ಕಾವೇರಿ ನದಿಯು ಹಾಗೂ ಬಲಭಾಗದಲ್ಲಿ ಲಕ್ಷ್ಮಣ ತೀರ್ಥ ನದಿಗಳು ಹರಿಯುತ್ತವೆ. ಈ ಕ್ಷೇತ್ರದಿಂದ ಸುಮಾರು 3 ಕಿ. ಮೀ. ದೂರದಲ್ಲಿ ಸಾಗರ ಕಟ್ಟೆ ಎಂಬ ಸ್ಥಳದಲ್ಲಿ ಎರಡು ನದಿಗಳ ಸಂಗಮವಾಗುತ್ತದೆ.

ಸುಮಾರು 220 ವರ್ಷಗಳ ಹಿಂದೆ ಈ ಪ್ರಾಂತ್ಯದಲ್ಲಿ ರೈತನೊಬ್ಬನು ತನ್ನ ಹೊಲವನ್ನು ಉಳುವಾಗ ಅವನ ನೇಗಿಲಿಗೆ ಮರದ ತುಂಡೊಂದು ಸಿಕ್ಕಿ ಹಾಕಿ ಕೊಂಡಿತೆನ್ನಲಾಗಿದೆ. ಅದನ್ನು ತೆಗೆದು ನೋಡುವಾಗ ಅದೊಂದು ಮನುಷ್ಯನ ಆಕೃತಿಯನ್ನು ಹೊಂದಿತ್ತು. ಮನೆಗೆ ತಂದು ಅದನ್ನು ಮಕ್ಕಳಿಗೆ ಆಡಲು ನೀಡಿದಾಗ, ಅದೇ ರಾತ್ರಿ ಕನಸಿನಲ್ಲಿ ಬಿಳಿಯ ವಸ್ತ್ರವನ್ನು ಧರಿಸಿದ್ದ ವ್ಯಕ್ತಿಯೋರ್ವರು ಕಾಣಿಸಿಕೊಂಡು ಅದು ಸಂತ ಮಹಾಪುರುಷರೊಬ್ಬರ ಪ್ರತಿಮೆ. ಅದನ್ನು ಗೌರವಿಸು ಹಾಗೂ ನಿನ್ನ ಹೊಲದಲ್ಲಿ ಅದು ದೊರಕಿದ ಸ್ಥಳದಲ್ಲಿ ಒಂದು ಪುಟ್ಟ ಗುಡಿಯನ್ನು ನಿರ್ಮಿಸು ಎಂದು ಹೇಳಿದನೆನ್ನಲಾಗಿದೆ. ಮಾನವ ಒಂದು ಶ್ರೇಷ್ಠವಾದ ಭಾವನಾತ್ಮಕ ಜೀವಿ. ಜಗತ್ತಿನ ಎಲ್ಲಾ ಜೀವಿಗಳಿಗೂ ತಮ್ಮದೇ ಆದ ಜಾತಿ ಧರ್ಮವಿದೆ. ಅದರಲ್ಲೂ ಭಾರತ ವಿಶೇಷ ಸ್ಥಾನವನ್ನು ಪಡೆದಿದೆ. ವಿವಿಧ ಜಾತಿ ಜನಾಂಗ ಧರ್ಮದ ಜನರು ನೆಲೆಸಿದ್ದಾರೆ. “ವಸು ದೈವ ಕುಟುಂಬಕಂ” ಎಂಬಂತೆ ಭಕ್ತಾಧಿಗಳು ತಮ್ಮ ಆತ್ಮ ಸಂವೇದನೆಗಾಗಿ ಮಾನಸಿಕ ಶಾಂತಿಗಾಗಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವುದು ಸಾಮಾನ್ಯ ವಾಗಿದೆ. ಕೊಡಗಿನಲ್ಲಿ ಹಲವಾರು ಕ್ರೈಸ್ತ ಧರ್ಮೀಯರಿದ್ದಾರೆ. ಹಲವಾರು ಚರ್ಚುಗಳಿವೆ. ಕ್ರೈಸ್ತರ ಜಗದ್ಗುರುಗಳು ಪುಣ್ಯಕ್ಷೇತ್ರಗಳಲ್ಲಿರುವ ವಿಶೇಷತೆಯನ್ನು ಗುರುತಿಸಿ, “ಬಸಿಲಿಕ” (ಜಗತ್ತಿನ ಶ್ರೇಷ್ಠ ದೇವಾಲಯಕ್ಕೆ ಹೋಲುವಂತಿರುವ) ಎಂಬ ಮಾನ್ಯತೆಯನ್ನು ನೀಡಿರುವ ಪುಣ್ಯಕ್ಷೇತ್ರ ಮೈಸೂರು ಜಿಲ್ಲೆಯ ಕೆ. ಆರ್. ನಗರ ತಾಲೂಕಿನ ಡೋರ್ನಹಳ್ಳಿದೆ. ಇದು ವಿಶ್ವವಿಖ್ಯಾತ ಮಹಾಸಂತ ಅಂತೋಣಿ ಅವರ ಬಸಿಲಿಕಾ. ಇಲ್ಲಿ ಆರೋಗ್ಯಕ್ಕಾಗಿ ಪ್ರಾರ್ಥಿಸಿದರೆ ಉತ್ತಮ ಆರೋಗ್ಯವು ದೊರಕುವುದಲ್ಲದೆ ಕಳೆದು ಹೋದ ವಸ್ತುವಿಗಾಗಿ ಪ್ರಾರ್ಥಿಸಿದರೆ ಆ ವಸ್ತುವು ನಮ್ಮ ಕೈ ಸೇರುತ್ತದೆ ಎನ್ನುವುದು ಭಕ್ತಾದಿಗಳ ಆಳವಾದ ನಂಬಿಕೆ. ಮೈಸೂರಿನಿಂದ ಹುಣಸೂರು ಮಾರ್ಗವಾಗಿ ಹಾಸನಕ್ಕೆ ಹೋಗುವಾಗ ದೊಡ್ಡೆಕೊಪ್ಪಲು ಎಂಬ ಗ್ರಾಮದ ಬಳಿ ಬಲಕ್ಕೆ ತಿರುಗಿ ಎರಡು ಕಿ. ಮಿ. ಕ್ರಮಿಸಿದರೆ ಈ ಪುಣ್ಯಕ್ಷೇತ್ರವು ಸಿಗುತ್ತದೆ. ಕೆ. ಆರ್. ನಗರದಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿ ದೊಡ್ಡೆಕೊಪ್ಪಲು ಊರಿನಲ್ಲಿ ಎಡಕ್ಕೆ ತಿರುಗಿದರೆ ಎರಡು ಕಿ. ಮಿ. ಅಂತರದಲ್ಲಿ ಈ ಪ್ರಸಿದ್ಧ ಸ್ಥಳ ದೊರಕುತ್ತದೆ.

ಮೈಸೂರಿನಿಂದ ಸುಮಾರು 40 ಕಿ. ಮೀ. ದೂರ, ಕುಶಾಲನಗರದಿಂದ 60 ಕಿ. ಮೀ. ಅಂತರದಲ್ಲಿ ಈ ಪುಣ್ಯಕ್ಷೇತ್ರವಿದೆ. ರಸ್ತೆ ಮತ್ತು ರೈಲು ಮಾರ್ಗವಾಗಿ ಈ ಪುಣ್ಯಕ್ಷೇತ್ರಕ್ಕೆ ಭಕ್ತಾದಿಗಳು ತಲುಪಬಹುದು. ಈ ಪುಣ್ಯಕ್ಷೇತ್ರದ ಎಡ ಭಾಗದಲ್ಲಿ ಕಾವೇರಿ ನದಿಯು ಹಾಗೂ ಬಲಭಾಗದಲ್ಲಿ ಲಕ್ಷ್ಮಣ ತೀರ್ಥ ನದಿಗಳು ಹರಿಯುತ್ತವೆ. ಈ ಕ್ಷೇತ್ರದಿಂದ ಸುಮಾರು 3 ಕಿ. ಮೀ. ದೂರದಲ್ಲಿ ಸಾಗರ ಕಟ್ಟೆ ಎಂಬ ಸ್ಥಳದಲ್ಲಿ ಎರಡು ನದಿಗಳ ಸಂಗಮವಾಗುತ್ತದೆ.

ಸುಮಾರು 220 ವರ್ಷಗಳ ಹಿಂದೆ ಈ ಪ್ರಾಂತ್ಯದಲ್ಲಿ ರೈತನೊಬ್ಬನು ತನ್ನ ಹೊಲವನ್ನು ಉಳುವಾಗ ಅವನ ನೇಗಿಲಿಗೆ ಮರದ ತುಂಡೊಂದು ಸಿಕ್ಕಿ ಹಾಕಿ ಕೊಂಡಿತೆನ್ನಲಾಗಿದೆ. ಅದನ್ನು ತೆಗೆದು ನೋಡುವಾಗ ಅದೊಂದು ಮನುಷ್ಯನ ಆಕೃತಿಯನ್ನು ಹೊಂದಿತ್ತು. ಮನೆಗೆ ತಂದು ಅದನ್ನು ಮಕ್ಕಳಿಗೆ ಆಡಲು ನೀಡಿದಾಗ, ಅದೇ ರಾತ್ರಿ ಕನಸಿನಲ್ಲಿ ಬಿಳಿಯ ವಸ್ತ್ರವನ್ನು ಧರಿಸಿದ್ದ ವ್ಯಕ್ತಿಯೋರ್ವರು ಕಾಣಿಸಿಕೊಂಡು ಅದು ಸಂತ ಮಹಾಪುರುಷರೊಬ್ಬರ ಪ್ರತಿಮೆ. ಅದನ್ನು ಗೌರವಿಸು ಹಾಗೂ ನಿನ್ನ ಹೊಲದಲ್ಲಿ ಅದು ದೊರಕಿದ ಸ್ಥಳದಲ್ಲಿ ಒಂದು ಪುಟ್ಟ ಗುಡಿಯನ್ನು ನಿರ್ಮಿಸು ಎಂದು ಹೇಳಿದನೆನ್ನಲಾಗಿದೆ. ಬಸಿಲಿಕಾ : 1969ರಲ್ಲಿ ಉದ್ಘಾಟನೆಗೊಂಡ ಈ ಪವಿತ್ರ ದೇವಾಲಯ ವನ್ನು ಜಗದ್ಗುರು ಪೆÇೀಪ್ ಫ್ರಾನ್ಸಿಸ್‍ರವರು ಅಕ್ಟೋಬರ್ 17, 2019 ರಂದು ಕಿರಿಯ ಬಸಿಲಿಕಾ ಎಂಬ ಉನ್ನತ ಪದವಿಗೆ ಏರಿಸಿದ್ದಾರೆ. ಇಡೀ ಕರ್ನಾಟಕದಲ್ಲಿರುವ ಕೇವಲ 4 ಬಸಿಲಿಕಾಗಳಲ್ಲಿ ಇದು ಕೂಡ ಒಂದು ಎಂಬುವುದು ಹೆಮ್ಮೆಯ ವಿಚಾರ. 2020, ಜೂನ್ 9 ರಂದು ಮೈಸೂರು ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ. ಕೆ. ಎ. ವಿಲಿಯಂ ಅವರು ಕೋವಿಡ್-19ರ ಕಾರಣ ಸರಳ ಆಚರಣೆಯೊಂದಿಗೆ ಅಧಿಕೃತವಾಗಿ ಕಿರಿಯ ಬಸಿಲಿಕಾ ಎಂಬ ಘೋಷಣೆಯನ್ನು ಮಾಡಿದರು. ಇದಕ್ಕೆ ಮೊದಲು ಈ ಮಹಾದೇವಾಲಯ ಹಾಗೂ ಪಕ್ಕದ ಗುರು ನಿವಾಸದ ನವೀಕರಣ ಕಾರ್ಯವನ್ನು ಕೈಗೆತ್ತಿಕೊಂಡ ಧರ್ಮಾಧ್ಯಕ್ಷರು ಅದನ್ನು ಯಶಸ್ವಿಯಾಗಿ ಮಾಡಿ ಮುಗಿಸಿದರು.

ಇಲ್ಲಿಗೆ ಬರುವ ಯಾತ್ರಾರ್ಥಿಗಳ ಅನುಕೂಲಕಾಗಿ ತಂಗುವ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಉಪಹಾರ ಕೇಂದ್ರ, ಧಾರ್ಮಿಕ ವಸ್ತುಗಳ ಮಾರಾಟ ಮಳಿಗೆ, ಸ್ವಚ್ಛ-ಹಸಿರು ಪರಿಸರ, ಉದ್ಯಾನವನ, ಕೇಶಾರ್ಪಣ ವ್ಯವಸ್ಥೆ, ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಮುನ್ನೆಚ್ಚರಿಕೆ ಕ್ರಮಗಳು ಹೀಗೆ ಅವಶ್ಯಕ ಎಲ್ಲಾ ವ್ಯವಸ್ಥೆಗಳು ಈ ಪುಣ್ಯಕ್ಷೇತ್ರದಲ್ಲಿವೆ.

ವಿಶೇಷ ದಿನಗಳು : ಪ್ರತೀ ವರ್ಷ ಜೂನ್ ತಿಂಗಳ 13 ರಂದು ಇಲ್ಲಿ ಹಬ್ಬದ ಮಹೋತ್ಸವ ನಡೆಯುತ್ತದೆ. 'ಡೋರ್ನಹಳ್ಳಿ ಜಾತ್ರೆ' ಎಂದೇ ಪ್ರಸಿದ್ಧವಾಗಿರುವ ಈ ಮಹೋತ್ಸವಕ್ಕೆ ಲಕ್ಷಾಂತರ ಭಕ್ತಾದಿಗಳು ಆ ತಿಂಗಳಿನಲ್ಲಿ ಭೇಟಿ ನೀಡುತ್ತಾರೆ. ಪ್ರತಿ ಭಾನುವಾರ ಮತ್ತು ಮಂಗಳವಾರ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಹೋಗುತ್ತಾರೆ.

ಸೇವಾಸಕ್ತ ಗುರುಗಳು : ಪ್ರಸ್ತುತ ಎನ್. ಟಿ. ಜೋಸೆಫ್‍ರವರು ಇಲ್ಲಿಯ ಪ್ರಧಾನ ಧರ್ಮಗುರುಗಳಾಗಿದ್ದಾರೆ. ಕೊಡಗಿನ ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿದ್ದ ಐಸಾಕ್ ರತ್ನಾಕರ್‍ರವರು ಇದರ ಆಡಳಿತಾಧಿಕಾರಿಗಳಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಗುರು ಇರುದಯರಾಜ್ ರವರು ಸಹಾಯಕ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಸಿಲಿಕಾದ ಅಭಿವೃದ್ಧಿಗಾಗಿ ಈ ಮೂವರು ಗುರುಗಳು ಶ್ರಮಿಸುತ್ತಿದ್ದಾರೆ.

ಕೊಡಗಿನಿಂದ ಯಾತ್ರಾರ್ಥಿಗಳು : ಕೊಡಗಿನಿಂದ ಈ ಪುಣ್ಯ ಕ್ಷೇತ್ರಕ್ಕೆ ಭಕ್ತಾದಿಗಳು ಭೇಟಿ ನೀಡುತ್ತಾರೆ. ಯಾವುದೇ ಭೇದವಿಲ್ಲದೆ ದೇವರ ಅನುಗ್ರಹಕಾಗಿ, ಆಶೀರ್ವಾದಕಾಗಿ, ಕಷ್ಟ ಪರಿಹಾರದ ನಂಬಿಕೆಯಿಂದ ಹಲವಾರು ಭಕ್ತರು ಈ ಕ್ಷೇತ್ರಕ್ಕೆ ಭೇಟಿ ಯನ್ನು ನೀಡುತ್ತಾರೆ ಮತ್ತು ಹರಕೆಯ ಸೇವೆಯನ್ನು ಸಲ್ಲಿಸುತ್ತಾರೆ. -ಚಾಲ್ರ್ಸ್ ಡಿಸೋಜ

ಉಪನ್ಯಾಸಕರು, ವೀರಾಜಪೇಟೆ.