ಸುಂಟಿಕೊಪ್ಪ, ನ. 24 ಮಾದಾಪುರ ವೃತ್ತದ ಗರ್ವಾಲೆ ಸೂರ್ಲಬ್ಬಿ ಗ್ರಾಮದ ಪೌತಿ ಖಾತೆ ಬದಲಾವಣೆ ಆಂದೋಲನವನ್ನು ತಾ. 25 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ ಸಾರ್ವಜನಿಕರು ಪೌತಿ ಖಾತೆದಾರರು ಸದುಪಯೋಗ ಪಡಿಸಿಕೊಳ್ಳುವಂತೆ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು ತಿಳಿಸಿದ್ದಾರೆ. ಮಾದಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಭಾಂಗಣದಲ್ಲಿ ಇಗೋಡ್ಲು, ಹಾಡಗೇರಿ, ಮೂವತೋಕ್ಲು, ಜಂಬೂರು, ಕುಂಬೂರು ಗ್ರಾಮಗಳ ಪೌತಿ ಖಾತೆ ಬದಲಾವಣೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.