ಸುಂಟಿಕೊಪ್ಪ, ನ. 24: ಸುಂಟಿಕೊಪ್ಪದಿಂದ ನಾಕೂರು ಸಂಪರ್ಕ ರಸ್ತೆ ಕಾಮಗಾರಿಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪರಿಶೀಲಿಸಿದರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರೂ. 6.2 ಕೋಟಿ ವೆಚ್ಚದಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ನಾಕೂರುವರೆಗಿನ 6.64 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದ್ದು, ಶಾಸಕರು ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಎಮ್ಮೆಗುಂಡಿಗೆ ತೆರಳುವ ರಸ್ತೆಯ ಬದಿಯಲ್ಲಿ ಒಂದು ಭಾಗದಲ್ಲಿ ಬಡಜನತೆಯು ಮನೆಯನ್ನು ನಿರ್ಮಿಸಿ ಕೊಂಡು ನೆಲೆಸಿದ್ದಾರೆ. ಇದರಿಂದ ಅಗಲೀಕರಣಕ್ಕೆ ತಡೆಯಾಗಿದ್ದು, ಅಗಲೀಕರಣಕ್ಕೆ ಬೇಕಾದ ಜಾಗವನ್ನು ತೆರವುಗೊಳಿಸಲು ನಿವಾಸಿಗಳ ಮನವೊಲಿಸುವಂತೆ ಸಂಬಂಧಿಸಿ ದವರಿಗೆ ತಿಳಿಸಿದರು. ಗುತ್ತಿಗೆದಾರರು ಕಾಮಗಾರಿ ನಿರ್ವಹಿಸುವಾಗ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಸೂಚಿಸಿದರು.