ಪೆರಾಜೆ, ನ. 24: ಪೆರಾಜೆಯ ಚಿಗುರು ಯುವಕ ಮಂಡಲದ ವತಿಯಿಂದ ಸಂಘದ ಮಾಸಿಕ ಶ್ರಮದಾನವನ್ನು ಜ್ಯೋತಿ ಪ್ರೌಢ ಶಾಲೆಯ ವಠಾರದಲ್ಲಿ ಹಮ್ಮಿಕೊಳ್ಳಲಾಯಿತು. ಶಾಲಾ ಆಟದÀ ಮೈದಾನದ ಸುತ್ತಲು ಬೆಳೆದಿದ್ದ ಗಿಡಗಂಟಿಗಳನ್ನು ಮತ್ತು ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಚಿಗುರು ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ಶಾಲಾ ಮುಖ್ಯೋಪಾಧ್ಯಾಯ ದೊಡ್ಡಣ್ಣ ಬರಮೇಲು, ಯುವಕಮಂಡಲದ ಅಧ್ಯಕ್ಷ ಕಿರಣ್ ಕುಂಬಳಚೇರಿ, ಕಾರ್ಯದರ್ಶಿ ದಿವಾಕರ ಮಜಿಕೋಡಿ, ಖಜಾಂಚಿ ಯತಿಶ್ಯಾಂ ಕುಂಬಳಚೇರಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯಚಂದ್ರ ಕುಂಬಳಚೇರಿ, ಅನಿಲ್, ಜಗದೀಶ್ ಕುಂಬಳಚೇರಿ, ಅಲ್ಲದೆ ರಾಕೇಶ್ ಕುಂದಲ್ಪಾಡಿ, ವಿಷ್ಣು ಪ್ರಸಾದ್ ಬಂಟೋಡಿ, ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ಸದಸ್ಯರಿಗೆ ಬೆಳಗ್ಗಿನ ಚಹ ತಿಂಡಿಯ ವ್ಯವಸ್ಥೆಯನ್ನು ಮುಖ್ಯ ಶಿಕ್ಷಕ ದೊಡ್ಡಣ್ಣ ಬರಮೇಲು ನೀಡಿದರು.