ಮಡಿಕೇರಿ, ನ. 24: ಮೂರ್ನಾಡು ಸಮುದಾಯ ಭವನದಲ್ಲಿ ಕಂದಾಯ ಇಲಾಖೆಯ ವತಿಯಿಂದ ಪೌತಿ-ವಾರಸು ಖಾತೆ ಆಂದೋಲನ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಆಂದೋಲನದ ಬಗ್ಗೆ ಕಂದಾಯ ಪರಿವೀಕ್ಷಕ ಸಣ್ಣರುದ್ರಪ್ಪ ಮಾಹಿತಿ ನೀಡಿದರು. ನಂತರ ಅರ್ಜಿಗಳನ್ನು ಸ್ವೀಕರಿಸಲಾಯಿತು. ಈ ಸಂದರ್ಭ ಗ್ರಾಮ ಲೆಕ್ಕಾಧಿಕಾರಿ ಅಕ್ಷತಾ ಬಿ. ಶೆಟ್ಟಿ, ಪಂಚಾಯಿತಿ ಆಡಳಿತ ಅಧಿಕಾರಿ ಗೌರವ್ಕುಮಾರ್ ಶೆಟ್ಟಿ, ಪೆÇ್ರಬೇಷನರಿ ಉಪವಿಭಾಗಾಧಿಕಾರಿ ಕಾವ್ಯ ಹಾಜರಿದ್ದರು.