ಮಡಿಕೇರಿ, ನ. 24: ನಗರದ ಇಂದಿರಾಗಾಂಧಿ ವೃತ್ತದಲ್ಲಿ ಇಂದಿರಾ ಪುತ್ತಳಿ ಹಾಗೂ ನಾಮಫಲಕ ಅಳವಡಿಸಲು ಕಾಂಗ್ರೆಸ್ ಮುಖಂಡರು ಮಡಿಕೇರಿ ನಗರಸಭೆ ಆಯಕ್ತ ರಾಮ್‍ದಾಸ್‍ರವರಿಗೆ ಮನವಿ ಸಲ್ಲಿಸಿದರು. ರಾಜೀವ್ ಗಾಂಧಿ ಪಂಚಾಯತ್ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ನೇತೃತ್ವದಲ್ಲಿ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಇಂದಿರಾ ಗಾಂಧಿ ವೃತ್ತದಲ್ಲಿ ಇಂದಿರಾ ಅವರ ನಾಮ ಫಲಕವಿದ್ದು ರಸ್ತೆ ಅಭಿವೃದ್ಧಿ ಸಮಯದಲ್ಲಿ ಅದನ್ನು ತೆರವುಗೊಳಿಸಿದ್ದರು. ಈಗ ಅಭಿವೃದ್ಧಿ ಕಾರ್ಯ ಮುಗಿದಿದ್ದು ತಕ್ಷಣವೇ ನಾಮಫಲಕ ಅಳವಡಿಸಲು ಕೋರಿದ್ದಾರೆ. ನಿಯೋಗದಲ್ಲಿ ಮಡಿಕೇರಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಭುರೈ, ವಸಂತ್ ಭಟ್, ಮಡಿಕೇರಿ ಬ್ಲಾಕ್ ಉಪಾಧ್ಯಕ್ಷ ವಿ.ಜಿ. ಮೋಹನ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಂಡೀರಾ ಸದಾ ಮುದ್ದಪ್ಪ, ನಗರಸಭೆ ಮಾಜಿ ಸದಸ್ಯ ಉದಯ್‍ಕುಮಾರ್, ಮಡಿಕೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿಗೌಡ ಭಾಗಿಯಾಗಿದ್ದರು.